ವರದಿಬ: ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ರಾಜ್ಯ ಸರ್ಕಾರ ನಡೆಸುತ್ತಿರುವ ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆ ಜೊತೆಗೆ ಕೇಂದ್ರ ಸರ್ಕಾರದ ಜನಗಣತಿ ಪ್ರಕ್ರಿಯೆಯ ಹಿನ್ನೆಲೆಯಲ್ಲಿ, ರಾಜ್ಯದಾದ್ಯಂತ ಬ್ರಾಹ್ಮಣ ಸಮಾಜದವರು ತಮ್ಮ ಜಾತಿಯನ್ನು ಕ್ರಮ ಸಂಖ್ಯೆ 210ರಲ್ಲಿ ‘ಬ್ರಾಹ್ಮಣ’ ಎಂದು ನಮೂದಿಸಬೇಕು ಎಂದು ತಾಲ್ಲೂಕಾ ಬ್ರಾಹ್ಮಣ ಅಭಿವೃದ್ಧಿ ಮಹಾಸಭಾ ಸಂಘದ ಅಧ್ಯಕ್ಷ ಬಿ.ಪಿ.ಕುಲಕರ್ಣಿ ತಿಳಿಸಿದ್ದಾರೆ. ಅವರು, ಈ ಜಾತಿ ಸಮೀಕ್ಷೆ ಮೂಲಕ ನಮ್ಮ ಸಮಾಜಕ್ಕೆ ಸರ್ಕಾರದ ಶಿಕ್ಷಣ, ಉದ್ಯೋಗ ಹಾಗೂ ವಿವಿಧ ರಾಜ್ಯ ಮತ್ತು ಕೇಂದ್ರ ಯೋಜನೆಗಳ ಸೌಲಭ್ಯ ದೊರಕುವಂತಾಗುತ್ತದೆ. ಹಾಗೆಯೇ ಮೀಸಲಾತಿ ಸಂಬಂಧಿತ ಸೌಲಭ್ಯಗಳನ್ನು ಪಡೆಯಲು ಸಹ ಜಾತಿಯನ್ನು ಸ್ಪಷ್ಟವಾಗಿ ನಮೂದಿಸುವುದು ಅತ್ಯಾವಶ್ಯಕ, ಎಂದು ತಿಳಿಸಿದರು. ಅದಕ್ಕಾಗಿ ಬ್ರಾಹ್ಮಣ ಸಮಾಜದ ಪ್ರತಿಯೊಬ್ಬರೂ ಜಾತಿ ಸಮೀಕ್ಷೆ ಹಾಗೂ ಜನಗಣತಿ ಸಂದರ್ಭದಲ್ಲಿ ‘ಕ್ರಮ ಸಂಖ್ಯೆ 210 ಬ್ರಾಹ್ಮಣ’ ಎಂದು ಸರಿಯಾಗಿ ದಾಖಲಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.