ವ್ಯಕ್ತಿತ್ವ ವಿಕಸನಕ್ಕೆ ಎನ್ನೆಸ್ಸೆಸ್ ಸಹಕಾರಿ : ಎಸಿ ಅಬೀದ್ ಗದ್ಯಾಳ
ಇಂಡಿ : ಇಂದಿನ ಯುವ ಪೀಳಿಗೆಯಲ್ಲಿ ಸಮಾಜದ ಕಳಕಳಿ ಹುಟ್ಟಿಸಲು ಮತ್ತು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತದೆ ಎಂದು ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ತಾಲೂಕಿನ ಹಿರೇರೂಗಿ ಬೊಳೆಗಾಂವದ ಶ್ರೀ ಬಸವಲಿಂಗ ಗಿರಿಜಾಮಾತಾಜಿ ಮಠದಲ್ಲಿ ನಡೆದ ಜಿ.ಆರ್.ಕಲಾ, ವಾಯ್.ಎ.ಪಾಟೀಲ ವಾಣ ಜ್ಯ,ಎಂ.ಎಫ್ ದೋಶಿ ವಿಜ್ಞಾನ ಮಹಾವಿದ್ಯಾಲದಿಂದ ಆಯೋಜಿಸಿದ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಎನ್ನೆಸ್ಸೆಸ್ ಶಿಬಿರ ಮಹಾತ್ಮಾ ಗಾಂಧಿಯವರ ಪರಿಕಲ್ಪನೆಯಾಗಿದ್ದು ನಿಸ್ವಾರ್ಥ ಸೇವೆ ಮತ್ತು ನಾಯಕತ್ವದ ಕೌಶಲವನ್ನು ಕಲಿಸುತ್ತದೆ.ಶಿಬಿರದಲ್ಲಿ ಉತ್ತಮ ಮಾರ್ಗದರ್ಶನ ಪಡೆದುಕೊಂಡು ಸಮಾಜದ ಜತೆ ಸಂಪರ್ಕ ಸಾಧಿಸಿ ಶಿಕ್ಷಣ ಆರೋಗ್ಯ ಪರಿಸರ ನೈರ್ಮಲೀಕರಣ ವೈಜ್ಞಾನಿಕ ಮನೋಭಾವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಶಿಬಿರವನ್ನು ಯಶಸ್ವಿಗೊಳಿಸಬೇಕೆಂದರು.
ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಬಿ.ಜಾಧವ,ಜಾವೇದ ತಾಂಬೋಳಿ, ಸುಸ್ಮಿತಾ ಎಸ್ ಮಾತನಾಡಿದರು. ವೇದಿಕೆಯ ಮೇಲೆ ಗ್ರಾ.ಪಂ ಅಧ್ಯಕ್ಷ ಪರಶುರಾಮ ಹೊಸಮನಿ, ಸದಸ್ಯ ಉಮೇಶ ಹಲಸಂಗಿ, ಎನ್ನೆಸ್ಸೆಸ್ ಅಧಿಕಾರಿ ಡಾ. ಪಿ.ಕೆ.ರಾಠೋಡ ಮತ್ತಿತರಿದ್ದರು.
ಸಮಾರಂಭದಲ್ಲಿ ಆನಂದ ನಡುವಿನಮನಿ, ಡಾ. ಜಯಪ್ರಸಾದ, ಮಲ್ಲಿಕಾರ್ಜುನ ಕೋಣದೆ,ಡಾ. ಸಿ.ಎಸ್.ಬಿರಾದಾರ,ಡಾ. ಸುರೇಂದ್ರ ಕೆ,ಶ್ರೀಶೈಲ,ಶ್ರೀಕಾಂತ ರಾಠೋಡಮತ್ತಿತರಿದ್ದರು.
ಇಂಡಿ ತಾಲೂಕಿನ ಹಿರೇರೂಗಿ ಬೊಳೆಗಾಂವದ ಶ್ರೀ ಬಸವಲಿಂಗ ಗಿರಿಜಾಮಾತಾಜಿ ಮಠದಲ್ಲಿ ಆಯೋಜಿಸಿದ ಎನ್ನೆಸ್ಸೆಸ್ ಶಿಬಿರದಲ್ಲಿ ಅಬೀದ ಗದ್ಯಾಳ ಮಾತನಾಡಿದರು.



















