ಸರಕಾರದ ಕೆಲಸ ದೇವರ ಕೆಲಸ ಎಂಬ ನಂಬಿಕೆ ನೌಕರರಲ್ಲಿ ಇರಬೇಕು
ಇಂಡಿ : ಸರಕಾರಿ ನೌಕರಿ ಕೆಲಸ ಸಿಕ್ಕ ಅವಕಾಶ ಸರಿಯಾಗಿ ಬಳಕೆ ಮಾಡಿಕೊಂಡು ಸರಕಾರಿ ಕೆಲಸ ದೇವರ ಕೆಲಸ ಎಂಬ ನಂಬಿಕೆ ಪ್ರತಿಯೋಬ್ಬರ ನೌಕರರಲ್ಲಿ ಇರಬೇಕು ಎಂದು ನಿಲಯ ಮೇಲ್ವೀಚಾರಕ ಬಿ.ಆರ ಓತಿಹಾಳ ಹೇಳಿದರು.
ನಗರದ ಡಾ.ಬಿ.ಆರ್ ಅಂಬೇಡ್ಕರ್ ಮೇಟ್ರಿಕ ನಂತರ ಬಾಲಕರ ವಸತಿ ನಿಲಯದಲ್ಲಿ ಮೇಲ್ವೀಚಾರಕ ಹುದ್ದೆಯಿಂದ ಪದೋನ್ನತಿ ಹೊಂದಿ ಇಂಧಿರಾಗಾAಧಿ ವೃತ್ತಿ ಅಭಿವೃದ್ದಿ ಪ್ರಾದೇಶಿಕ ಕೇಂದ್ರ ಬೆಳಗಾವಿ ಜಿಲ್ಲೆಗೆ ಹೋಗುತ್ತಿರುವ ಆನಂದ ಕಳಸಗೊಂಡ ಇವರಿಗೆ ಶಾಲು ಹೋದಿಸಿ ಸನ್ಮಾನಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆನಂದ ಕಳಸಗೊಂಡ ವಿಧ್ಯಾರ್ಥಿಗಳನ್ನು ಬಹಳ ಹತ್ತಿರದಿಂದ ಮನೆಯ ಮಕ್ಕಳಂತೆ ಕಂಡಿದ್ದಾರೆ. ವಸತಿ ನಿಲಯಕ್ಕೆ ಇವರ ಸೇವೆ ೭-೮ ವರ್ಷಗಳ ಸುಧೀರ್ಘ ಕೆಲಸ ನಿರ್ವಹಿಸಿ ವಿಧ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ವಸತಿ ನಿಲಯದಲ್ಲಿ ವಾಸವಾಗಿರುವ ವಿಧ್ಯಾರ್ಥಿಗಳು ಸ್ಥಿತಿವಂತರಿರುವುದಿಲ್ಲ ಇಂತಹ ಮಕ್ಕಳಲ್ಲಿ ದೇವರನ್ನು ಕಾಣಬೇಕು ಎಂದರು.
ಪದೋನ್ನತಿ ಹೊಂದಿ ನಿರ್ಗಮಿಸುತ್ತಿರುವ ಆನಂದ ಕಳಸಗೊಂಡ ಮಾತನಾಡಿ ವಿಧ್ಯಾರ್ಥಿಗಳು ದೇವರ ಸಮಾನ ಸರಕಾರ ವಿಧ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿಗೆ ಅನೇಕ ಸೌಲಭ್ಯಗಳು ನೀಡುತ್ತಿದೆ ಅದನ್ನು ಸರಿಯಾಗಿ ತಲುಪಿಸಬೇಕು. ಇಲ್ಲಿಯವರೆಗೆ ಸಹಕಾರ ಮಾಡಿದ ಇಲಾಖೆ ಅಧಿಕಾರಿಗಳು , ಸಿಬಂದ್ದಿ ಹಾಗೂ ವಿಧ್ಯಾರ್ಥಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಸಿಬಂದ್ದಿಗಳಾದ ಮಲ್ಲಪ್ಪ ಹಳ್ಳದಮನಿ, ವಿನಾಯಕ ದೊಡಮನಿ, ರಾಕೇಶ ಕಾಳೆ, ಮಹೇಶ ಪೋದ್ದಾರ ,ವಿಧ್ಯಾರ್ಥಿಗಳಾದ ಭರತ ಮಡ್ಡಿಮನಿ, ಬಸವರಾಜ ರೂಗಿ, ಭೀಮಾಶಂಕರ ವಡ್ಡರ್, ಗುಂಡು ಶರ್ಮಾ ,ಕೀರಣ ಕಟ್ಟಿಮನಿ, ರಾಮಣ್ಣಾ ಪಾಟೀಲ, ಬಸವರಾಜ ಹಿರೇಕುರಬರ್ ಮತ್ತಿತರಿದ್ದರು.
ನಿಲಯ ಮೇಲ್ವೀಚಾರಕ ಬಿ.ಆರ್ ಓತಿಹಾಳ ಮಾತನಾಡುತ್ತಿರುವುದು.



















