ಯಾದಗಿರಿ: ವಡಗೇರಾ ತಾಲೂಕಿನ ಕುರಿಹಾಳ ಗ್ರಾಮದಲ್ಲಿ ವಿಜೃಂಭಣೆಯಿಂದ ಶ್ರೀ ದಾವಲ್ ಮಲ್ಲಿಕ್ ಉರುಸ್ ಜರುಗಿತು. ಹಿಂದೂ-ಮುಸ್ಲಿಂ ಎನ್ನದೇ ಎಲ್ಲರೂ ಭಾವೈಕ್ಯತೆಯಿಂದ ದೇವರ ಸೇವೆಯಲ್ಲಿ ತೊಡಗಿ ಉರುಸ್ ಆಚರಿಸಿದರು. ವಾದ್ಯ ಮೇಳಗಳೊಂದಿಗೆ ಭಕ್ತರು ಧೀಡ್ ನಮಸ್ಕಾರ, ಜ್ಯೋತಿ ಹರಕೆ ಸಲ್ಲಿಸಿದರು. ನಂತರ ದೇವರ ನುಡಿಯನ್ನು ಹೇಳಲಾಯಿತು. ಸರ್ವ ಧರ್ಮೀಯರು ತನು ಮನದಿಂದ ಭಾಗಿಯಾಗಿದ್ದರು.