ಒಂಟಿ ಸಲಗ ದಾಳಿ; ಇರ್ವರ್ ರೈತರಿಗೆ ತೀವ್ರ ಗಾಯ..!
ಹನೂರು : ರೈತರಿಬ್ಬರ ಮೇಲೆ ಒಂಟಿ ಸಲಗ ದಾಳಿ ನಡೆಸಿದ ಪರಿಣಾಮ ಇಬ್ಬರು ರೈತನಿಗೆ ತೀವ್ರವಾದ ಗಾಯಗಳಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ
ಮಲೆ ಮಹದೇಶ್ವರ ಅಭಯಾರಣ್ಯದಲ್ಲಿ ನಡೆದಿದೆ.
ದಿನ್ನಳ್ಳಿಯ ರೈತರಿಬ್ಬರು ಕಾಡಿನೊಳಗೆ ಹಸುಗಳನ್ನು ಮೇಯುಸುತ್ತಿದ್ದಾಗ ದಾಳಿ ನಡೆದಿದೆ. ದಿನಳ್ಳಿ ಗ್ರಾಮದ ರೈತ ಸಿದ್ದ ಮಾರಿಯಪ್ಪ (65) ಮತ್ತು ಗಿರಿಯಪ್ಪ (55) ತಮ್ಮ ಹಸುಗಳನ್ನು ಮೇಯುಸುತ್ತಿದ್ದ ವೇಳೆ ಒಂಟಿ ಸಲಗ ಏಕಾಏಕಿ ದಾಳಿ ನಡೆಸಿದೆ. ಘಟನೆಯಿಂದ ಬೆನ್ನಿಗೆ ಹಾಗೂ ತಲೆ ಭಾಗಕ್ಕೆ ತೀವ್ರತರವಾದ ಗಾಯಗಳಾಗಿದೆ ಎನ್ನಲಾಗುತ್ತಿದ್ದು, ಗಾಯಾಳುವನ್ನು ರಾಮಾಪುರದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.