ರಾಯಚೂರು : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಾನ್ವಿ ಕ್ಷೇತ್ರಕ್ಕೆ ಬಿಜೆಪಿಯ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಅಯ್ಯಪ್ಪ ನಾಯಕ ಮ್ಯಾಕಲ್ ಅವರಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಾನ್ವಿ ಕ್ಷೇತ್ರಕ್ಕೆ ಟಿಕೆಟ್ ನೀಡಬೇಕು ಎಂದು ಬಿಜೆಪಿ ಮಾನ್ವಿ ಮಂಡಲ ಕಾರ್ಯದರ್ಶಿ ಅಂಬಣ್ಣ ನಾಯಕ ಸಿರವಾರ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಬಿಜೆಪಿಯ ಎಸ್ಟಿ ಮೋರ್ಚಾ ಜಿಲ್ಲಾ ಧ್ಯಕ್ಷ ಅಯ್ಯಪ್ಪ ನಾಯಕ ಮ್ಯಾಕಲ್ ಅವರು ಮಾನ್ವಿಯಲ್ಲಿ ವಿದ್ಯಾರ್ಥಿಗಳ, ರೈತ, ಕಾರ್ಮಿಕರ ಪರ ಅನೇಕ ಹೋರಾಟ ಮಾಡುವ ಮೂಲಕ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ.ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟಿಲ್, ಯುವ ಮೋರ್ಚಾದ ಅಧ್ಯಕ್ಷರು ಮಾನ್ವಿ ಕ್ಷೇತ್ರದಿಂದ ಟಿಕೇಟ್ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅನಂತರೆಡ್ಡಿ, ನಾಗರಾಜ ನಾಯಕ ಇದ್ದರು.