ಲಿಂಗಸೂಗೂರು: ತಾಲೂಕಿನ ಹಲಕಾವಟಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2022 23 ನೇ ಸಾಲಿನ ಶಾಲಾ ಸಂಸತ್ತು ರಚನೆಗಾಗಿ ವಿದ್ಯಾರ್ಥಿಗಳಿಂದ (5ರಿಂದ 7ನೇ ತರಗತಿ) EVM ಮೂಲಕ ಚುನಾವಣೆ ನಡೆಸಲಾಯಿತು.
ಚುನಾವಣೆಯಲ್ಲಿ PRO ಆಗಿ ಸಂಗಣ್ಣ ಹುನೂರ್, APRO ಆಗಿ ಸಂಗಪ್ಪ ಹುನುಗುಂದ, ಮತಗಟ್ಟೆ ಅಧಿಕಾರಿಗಳಾಗಿ ದ್ರಾಕ್ಷಾಯಿಣಿ ಗಚ್ಚಿನಮನಿ ಮುಖ್ಯಗುರುಗಳು ಹಾಗೂ ದೇವಕ್ಕ ಇವರು ಕಾರ್ಯನಿರ್ವಹಿಸಿದರು.
ಪ್ರಥಮ ಬಾರಿಗೆ ತಂತ್ರಜ್ಞಾನಾಧರಿತ Voting Machine App ಬಳಸಿ ವಿದ್ಯಾರ್ಥಿಗಳಿಗೆ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸಿದರು. Votting Machine ಬಳಕೆಯ ಬಗ್ಗೆ ಮಾನಪ್ಪ ರಾಥೋಡ್, ಗೋಪಾಲ್ ಮಾಡಬಾಳ್, ಮಲ್ಲಿಕಾರ್ಜುನ ಹೋಟಿ ಶಿಕ್ಷಕರು ಮಾಹಿತಿ ನೀಡಿದರು.
ಒಟ್ಟಾರೆಯಾಗಿ ಸ್ಥಳೀಯ ಸಂಸ್ಥೆಗಳಲ್ಲಿ ಚುನಾವಣೆಗಳು ನಡೆಯುವಂತೆ ಶಾಲೆಯಲ್ಲಿ ನಡೆದಿದ್ದು ವಿಶೇಷತೆಯಿಂದ ಕೂಡಿತ್ತು.
ಅಂತಿಮವಾಗಿ 2022- 23 ನೇ ಸಾಲಿನ ಶಾಲಾ ಸಂಸತ್ ಗೆ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಂದ ಪ್ರಮಾಣವಚನ ಬೋಧನೆ ಕಾರ್ಯಕ್ರಮ ಜರಗಿತು.
ಶಾಲಾ ಸಂಸತ್ತು ಈ ಕೆಳಗಿನಂತಿದೆ.
1) ಮುಖ್ಯಮಂತ್ರಿಗಳಾಗಿ ಅಮೃತ ಹೊಸಮನಿ,
2) ಉಪಮುಖ್ಯಮಂತ್ರಿಯಾಗಿ ಸುನಿಲ್ ಗೌಡ
3) ಗ್ರಂಥಾಲಯ ಮಂತ್ರಿಯಾಗಿ ಸಮೀರ್ ಜಮಾದಾರ್
4) ಕ್ರೀಡಾ ಮಂತ್ರಿಯಾಗಿ ಯಮನೂರಪ್ಪ ಗೌಂಡಿ
5) ಆಹಾರ ಮಂತ್ರಿಯಾಗಿ ಅಲ್ಮಾಸ್ ಹಿರೇಮನಿ
6) ಶಿಕ್ಷಣ ಮಂತ್ರಿಯಾಗಿ ಸಂಗೀತ ಭಗವತಿ
7) ಪ್ರವಾಸ ಮಂತ್ರಿಯಾಗಿ ಯಮನೂರು ಬಾರಕೇರ
8) ಆರೋಗ್ಯ ಮಂತ್ರಿಯಾಗಿ ವೈಶಾಲಿ ನೂರು
9) ಸಾಂಸ್ಕೃತಿಕ ಮಂತ್ರಿಯಾಗಿ ವಿಜಯಲಕ್ಷ್ಮಿ ಹೂಗಾರ್
10) ತೋಟಗಾರಿಕೆ ಮಂತ್ರಿಯಾಗಿ ಅನಿಲ್ ಕುಮಾರ್ ಬಾರಕೇರ.