ಕರ್ನಾಟಕ ರಾಜ್ಯ ಸಹಕಾರಿ ಪಟ್ಟಣ ಬ್ಯಾಂಕುಗಳ ಮಹಾಮಂಡಳಿಯ ಎನ್ ಕ್ಷೇತ್ರದ ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆ..!
ವರದಿ : ಬಸವರಾಜ ಕುಂಬಾರ ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಕರ್ನಾಟಕ ರಾಜ್ಯ ಸಹಕಾರಿ ಪಟ್ಟಣ ಬ್ಯಾಂಕುಗಳ ಮಹಾಮಂಡಳಿಯ ಎನ್ ಕ್ಷೇತ್ರದ ಚುನಾವಣೆಯಲ್ಲಿ ನಿರ್ದೇಶಕರಾಗಿ
ಆಯ್ಕೆಯಾಗಲು ಕಾರಣೀಭೂತರಾದ ಮುದ್ದೇಬಿಹಾಳ ಮತಕ್ಷೇತ್ರದ ಕೆಎಸ್ ಡಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ ಎಸ್ ನಾಡಗೌಡ (ಅಪ್ಪಾಜಿ) ಬೆಂಗಳೂರಿನ ಇವರ ನಿವಾಸಕ್ಕೆ ಭೇಟಿ ನೀಡಿ ಕೃತಜ್ಞತೆಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿಜಯಪುರ ಜೆ.ಓ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಅರ್ಜುನ್ ಲಮಾಣಿ, ನಿರ್ದೇಶಕರಾದ ಹನುಮಂತ ಕೊಣದಿ, ಅಲ್ಲಾಭಕ್ಷ ವಾಲಿಕಾರ, ಅಶೋಕ ಚನ್ನಬಸುಗೋಳ, ರಾಜ್ಯ ಎಲ್ ಟಿ ಓ ಪ್ರ.ಕಾರ್ಯದರ್ಶಿ ಎಚ್ ಎಲ್ ಚೆಲುವರಾಜ, ಹೆಲ್ತ್ ಸೊಸೈಟಿ ಉಪಾಧ್ಯಕ್ಷ ಸಂತೋಷ್ ಅಂಗಡಗೇರಿ, ಹುನಗುಂದ ತಾಲೂಕ ಸ ನೌ ಸಂಘದ ಖಜಾಂಚಿ ಶರಣಗೌಡ ಕೊಣ್ಣೂರ ಹಾಗೂ ಶ್ರೀ ವ್ಹಿ ವ್ಹಿ ಪವಾಡಶೆಟ್ಟಿ ಸೇರಿದಂತೆ ಉಪಸ್ಥಿತರಿದ್ದರು


















