ಪೌಷ್ಟಿಕ ಆಹಾರವಾಗಿ ಮೊಟ್ಟೆ ಹಾಗೂ ಬಾಳೆಹಣ್ಣಿನ ವಿತರಣೆ
ಇಂಡಿ: ವಿದ್ಯಾರ್ಥಿಗಳಿಗೆ ಅಪೌಷ್ಠಿಕತೆ ಮತ್ತು ರಕ್ತ ಹೀನತೆ ನಿವಾರಿಸಲು ಮಧ್ಯಾಹ್ನದ ಬಿಸಿಯೂಟದೊಂದಿಗೆ ವಾರದ ಎಲ್ಲಾ 6 ದಿನಗಳಲ್ಲಿ ಪೂರಕ ಪೌಷ್ಠಿಕ ಆಹಾರವಾಗಿ ಮೊಟ್ಟೆ ವಿತರಿಸುವ ಯೋಜನೆ ಇಂದು ರಾಜ್ಯದಾದ್ಯಂತ ಅನುಷ್ಠಾನಗೊಳ್ಳುತ್ತಿದೆ.
ಈ ನಿಮಿತ್ತ ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯ ವತಿಯಿಂದ ಅಕ್ಷರ ದಾಸೋಹ ಮಧ್ಯಾನ್ಹದ ಉಪಹಾರ ಯೋಜನೆಯಡಿ ವಾರದ 6 ದಿನಗಳ ಪೂರಕ ಪೌಷ್ಟಿಕ ಆಹಾರವಾಗಿ ಮೊಟ್ಟೆ ಹಾಗೂ ಬಾಳೆಹಣ್ಣನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಮಾಳಪ್ಪ ಪೂಜಾರಿ,ಉಪಾಧ್ಯಕ್ಷ ರಮೇಶ ಮಠಪತಿ, ಪರಶುರಾಮ ಹೊಸಮನಿ, ಸದಸ್ಯರಾದ ಹನಮಂತ ಝಳಕಿ, ಸಂತೋಷ ಸಾಲೋಟಗಿ, ಪಡೆವ್ವ ನಡುವಿನಮನಿ, ಶಾಲುಬಾಯಿ ಸೈನಸಾಕಳೆ, ಮುಖ್ಯ ಶಿಕ್ಷಕರಾದ ಅನಿಲ ಪತಂಗಿ, ವ್ಹಿ ವೈ ಪತ್ತಾರ, ಎಸ್ ಎಸ್ ಅರಬ ಹಾಗೂ ಶಿಕ್ಷಕರಾದ ಸಂತೋಷ ಬಂಡೆ, ಎಸ್ ಆರ್ ಚಾಳೇಕರ, ಎಸ್ ಎಂ ಪಂಚಮುಖಿ, ಸಾವಿತ್ರಿ ಸಂಗಮದ, ಎಫ್ ಎ ಹೊರ್ತಿ, ಎಸ್ ಬಿ ಕುಲಕರ್ಣಿ, ಎಸ್ ವ್ಹಿ ಬೇನೂರ, ಎಸ್ ಎನ್ ಡಂಗಿ, ಜೆ ಸಿ ಗುಣಕಿ, ಎಸ್ ಡಿ ಬಿರಾದಾರ, ಶಾಂತೇಶ ಹಳಗುಣಕಿ, ಶ್ರದ್ಧಾ ಬಂಕಲಗಾ ಮತ್ತು ಅತಿಥಿ ಶಿಕ್ಷಕರಾದ ಭೀರಪ್ಪ ಹೊಸೂರ, ಪ್ರಜ್ವಲ ಕುಲಕರ್ಣಿ ಸೇರಿದಂತೆ ಅನೇಕ ಗ್ರಾಮಸ್ಥರು,ಮಕ್ಕಳು ಉಪಸ್ಥಿತರಿದ್ದರು.