ಸಿರವಾರ: ಪೊಲೀಸ್ ಅಂದ್ರೆ ಸಾಕು ಮೂಗು ಮುರಿಯುವ ಕಾಲದಲ್ಲಿ ಸಿರವಾರ ಪೊಲೀಸ್ ರು ಮಾಡಿರುವ ಕೆಲಸಕ್ಕೆ ಶ್ಲಾಘನೀಯ ವ್ಯಕ್ತವಾಗಿದೆ.ಹೌದು ಬಿಸಿಲನಾಡು ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನಲ್ಲಿ ಭೀಕರ ಅಪಘಾತ ನಡೆದು ವ್ಯಕ್ತಿಯೋರ್ವ ಸಾಪನ್ನಪ್ಪಿದ ಘಟನೆ ನಡೆದಿದೆ.
ಇನ್ನು ಸಿರವಾರ ಪಟ್ಟಣದ ಅಚ್ಚಾ ಶ್ರೀಶೈಲ ವೇ ಬ್ರಿಡ್ಜ ಹತ್ತಿರ ದುರ್ಘಟನೆ ಸಂಭವಿಸಿದ್ದು, ಕ್ರೇನ್ ಡಿಕ್ಕಿ ಹೊಡೆದ ಪರಿಣಾಮ ಅಪರಿಚಿತ ವ್ಯಕ್ತಿ ಸ್ಥಳದಲ್ಲಿ ಅಸುನೀಗಿದ್ದಾನೆ. ಸಧ್ಯ ಕ್ರೇನ್ ಚಾಲಕ ಪರಾರಿಯಾಗಿದ್ದು, ಇನ್ನು ಘಟನಾ ಸ್ಥಳಕ್ಕೆ ಸಿರವಾರ ಪೊಲೀಸ್ ಠಾಣೆಯ PSI ಗೀತಾಂಜಲಿ ಶಿಂದೆ ಹಾಗೂ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರೆ.
ಸ್ಥಳದಲ್ಲಿದ್ದ ಯಾರೂ ಮೃತದೇಹ ವನ್ನು ಎತ್ತಲು ಹಿಂದೆ ಮುಂದೆ ನೋಡುತ್ತಿದ್ದರು. ಕೊನೆಗೆ PSI ಗೀತಾಂಜಲಿ ಶಿಂದೆ, ಹೆಡ್ ಕಾನ್ಸ್ ಸ್ಟೆಬಲ್ ಭೀಮರೆಡ್ಡಿ ,ಇತರ ಪೊಲೀಸ್ ಸಿಬ್ಬಂದಿಗಳು ಮೃತ ದೇಹವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ.