ಶಿಕ್ಷಣ ತಜ್ಞರ ವಿಶೇಷ ಸಭೆ
ವಿಜಯಪೂರ : ನಗರದ ಪಿಡಿಜೆ ಕಾಲೇಜಿನ ಸಭಾಂಗಣದಲ್ಲಿ ನಡೆದ ಶಿಕ್ಷಣ ತಜ್ಞರ ವಿಶೇಷ ಸಭೆ ಸುಮಾರು 300 ಕ್ಕೂ ಹೆಚ್ಚಿನ ಶಿಕ್ಷಕರು ಪಾಲ್ಗೊಂಡು ವಿಶೇಷ ಸಭೆ ಯಶಸ್ವಿಗೊಳಿಸಿದರು.
ಅದಲ್ಲದೆ ಸುಮಾರು 2 ಗಂಟೆಗಳ ಕಾಲಕ್ಕಿಂತಲೂ ಹೆಚ್ಚು NEP- 2020 ಕುರಿತು ಬಹಳ ವಿಸ್ತೃತವಾದ ಉಪನ್ಯಾಸ ಮತ್ತು ಚರ್ಚೆಗಳು ನಡೆದವು.
ಈ ಸಂದರ್ಭದಲ್ಲಿ ರವೀಂದ್ರ ರೇಷ್ಮೆ ಮಾತಾನಾಡಿ ಅವರು, ಬಹಳ ಚೆನ್ನಾಗಿ ಅಂಕಿ ಅಂಶಗಳ ಸಮೇತ ಹಿಂದಿನ , ಪ್ರಸ್ತುತ ಹಾಗೂ ಮುಂದಿನ ಶೈಕ್ಷಣಿಕ ಬದಲಾವಣೆಯ ಬಗ್ಗೆ ಹಾಗೂ NEP ಅವಶ್ಯಕತೆಯ ಬಗ್ಗೆ ವಿವರವಾಗಿ ಹೇಳಿದರು. ಇನ್ನೂ ಜಿಗಜಿನ್ನಿ ಅಧ್ಯಕ್ಷೀಯ ಮಾತುಗಳನ್ನಾಡಿದರು, ಅನುಪ ದೇಶಪಾಂಡೆಯವರು ಪ್ರಾಸ್ತಾವಿಕ ಮಾತು ಹೇಳಿದರು .
ಹಿಂದಿನ ಶಿಕ್ಷಣ ಸಚಿವ ಶ್ರೀ ಬಿ.ಸಿ .ನಾಗೇಶ್
ಶ್ರೀ ಅರುಣ್ ಶಹಾಪುರ್ ಅವರು ಬಹಳ ಪರಿಣಾಮಕಾರಿಯಾಗಿ ಅಭಿಪ್ರಾಯ ಮಂಡಿಸಿದರು.
ವಿಧಾನ ಪರಿಷತ್ ಸದಸ್ಯರಾದ ಹನುಮಂತ ನಿರಾಣಿ ಸಹಿತ ಹಲವಾರು ಕಾಲೇಜುಗಳ ಪ್ರಾಚಾರ್ಯರು ಹಿರಿಯ ಶಿಕ್ಷಕರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸಭೆಯ ಉಪಯೋಗವನ್ನ ಪಡೆದುಕೊಂಡರು.