ಸಿಂಧನೂರು: ಬಾಲ್ಯದ ದಿನಗಳಲ್ಲಿ ನಾನು ಸಣ್ಣ ಗ್ರಂಥಾಲಯದಲ್ಲಿ ಅಧ್ಯಯನ ಮಾಡಿದ್ದೆ ಗ್ರಂಥಾಲಯ ಸ್ಥಾಪನೆ ಮಾಡಿರುವುದು ಉತ್ತಮ ಕೆಲಸ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ನಿಖಿಲ್ ಬಿ ಅಭಿಪ್ರಾಯ ಪಟ್ಟರು.
ರಾಯಚೂರ ಜಿಲ್ಲೆಯ ಸಿಂಧನೂರು ಡಿವೈಎಸ್ಪಿ ಕಚೇರಿಯಲ್ಲಿ ಪೋಲಿಸ್ ಹಾಗೂ ಅವರ ಮಕ್ಕಳಿಗಾಗಿ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿದರು. ನಾನು ಬಾಲ್ಯದ ದಿನಗಳಲ್ಲಿ ಸಣ್ಣ ಗ್ರಂಥಾಲಯದಲ್ಲಿ ಅಧ್ಯಯನ ಮಾಡಿರುವುದು ಈ ಗ್ರಂಥಾಲಯ ನೋಡಿದರೆ ಬಾಲ್ಯದ ದಿನಗಳು ನೆನಪಿಗೆ ಬರುತ್ತದೆ.ಪೊಲೀಸ್ ಸಿಬ್ಬಂದಿ ವರ್ಗವು ಅಧ್ಯಯನಕ್ಕಾಗಿ ರಜಾ ತೆಗೆದುಕೊಂಡು ತೆರಳುತ್ತಿದ್ದರು. ಇದರಿಂದ ಸಿಬ್ಬಂದಿ ಕೊರತೆ ಕೆಲವು ಸಮಯದಲ್ಲಿ ಬರುತ್ತಿತ್ತು. ಈ ರೀತಿ ಗ್ರಂಥಾಲಯ ಮಾಡುವುದರಿಂದ ಪೋಲಿಸರು ಹಾಗೂ ಅವರ ಮಕ್ಕಳು ಅಧ್ಯಯನಕ್ಕೆ ಅನುಕೂಲ ಕಲ್ಪಿಸುತ್ತದೆ. ಜೊತೆಗೆ ಕೆಲವು ಸಂದರ್ಭಗಳಲ್ಲಿ ಡಿವೈಎಸ್ಪಿ ಇತರರು ಅಧ್ಯಯನ ಮಾಡುವವರಿಗೆ ಮಾರ್ಗದರ್ಶನಗಳನ್ನು ಕೊಡಬಹುದು ಎಂದು ತಿಳಿಸಿದರು.
ಇನ್ನೂ ಅಕ್ರಮ ಮರಳು ದಂಧೆಕೋರರಿಂದ ಪೊಲೀಸರಿಗೆ ತಿಂಗಳ ವಂತಿಕೆ ಹಾಗೂ ಸಿಬ್ಬಂದಿ ಕೊರತೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆ ಉತ್ತರಿಸಿದ ಅವರು ಮಾರ್ಚ್ ತಿಂಗಳಲ್ಲಿ 140 ಹೊಸ ಸಿಬ್ಬಂದಿಗಳ ನೇಮಕವಾಗುತ್ತದೆ. ಅಕ್ರಮ ಮರಳು ದಂಧೆ ಕುರಿತು ಜಿಲ್ಲಾಧಿಕಾರಿ ಸಭೆಯನ್ನು ನಡೆಸಿದ್ದಾರೆ. ಎಲ್ಲಾ ವಿಚಾರ ಕುರಿತು ಚರ್ಚೆಯಾಗಿದೆ. ಅಕ್ರಮ ಮರಳು ದಂಧೆ ತಡೆಗಟ್ಟಲು ಪೋಲಿಸ್ ಇಲಾಖೆ ಇತರೆ ಸಂಬಂಧಿಸಿದ ಇಲಾಖೆಗಳ ಸಮಿತಿ ರಚನೆ ಮಾಡಲಾಗುವುದು ಎಂದು ತಿಳಿಸಿದರು.