ಇಲಾಖೆಗೆ ಗೌರವ ತರುವಂತೆ ಕರ್ತವ್ಯ ನಿರ್ವಹಿಸಬೇಕು : ಉಮೇಶ ಲಮಾಣಿ
ಇಂಡಿ: ಇಲಾಖೆಗೆ ಚ್ಯುತಿ ತರುವ ಕೆಲಸ ಯಾರೂ ಮಾಡದೆ, ಗೌರವ ತರುವ ಕೆಲಸ ಮಾಡಬೇಕು. ಸಮಾಜದಲ್ಲಿರುವ ಕಟ್ಟಕಡೆಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಲಿ ಎಂಬ ಸದುದ್ದೇಶದಿಂದ ಸರ್ಕಾರ ವಸತಿ ನಿಲಯಗಳನ್ನು ಆರಂಭಿಸಿ ಮಕ್ಕಳಿಗೆ ವಸತಿ,ಊಟ,ಇತರೆ ಸೌಲಭ್ಯಗಳನ್ನು ಕಲ್ಪಿಸಿದೆ. ವಸತಿ ನಿಲಯದ ಎಲ್ಲ ನಿಲಯ ಪಾಲಕರು ವಸತಿ ನಿಲಯದಲ್ಲಿ ಪ್ರವೇಶ ಪಡೆದ ಮಕ್ಕಳಿಗೆ ಗುಣಮಟ್ಟದ ಊಟ ಹಾಗೂ ಸರ್ಕಾರದ ಇತರೆ ಸೌಲಭ್ಯಗಳು ನೀಡಬೇಕು ಎಂದು ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ ಲಮಾಣಿ ಹೇಳಿದರು.
ಅವರು ತಾಲೂಕು ಸಮಾಜ ಕಲ್ಯಾಣ ಇಲಾಖೆಗೆ ಸಹಾಯಕ ನಿರ್ದೇಶಕರಾಗಿ ಆಗಮಿಸಿದ ಪ್ರಯುಕ್ತ ವಸತಿ ನಿಲಯದ ನಿಲಯ ಪಾಲಕರು ಹಾಗೂ ಸಿಬ್ಬಂದಿಯವರು ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವಿಕರಿಸಿ ಮಾತನಾಡಿದರು.
ಸರ್ಕಾರಿ ನೌಕರಿ ಎಂದ ಮೇಲೆ ವರ್ಗಾವಣೆ ಹೊಂದುವುದು ಸಹಜ.ವರ್ಗಾವಣೆ ಹೊಂದಿದ ಸ್ಥಳದಲ್ಲಿ ಕರ್ತವ್ಯಕ್ಕೆ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸುವುದು ಮುಖ್ಯ.ಹೀಗಾಗಿ ವಸತಿ ನಿಲಯದ ನಿಲಯ ಪಾಲಕರು ಆಡಳಿತದಲ್ಲಿ ಸಹಕಾರ ನೀಡಿ ವಸತಿ ನಿಲಯಗಳ ಸುಧಾರಣೆಗೆ ಕೈ ಜೋಡಿಸಬೇಕು ಎಂದು ಹೇಳಿದರು.
ತಾಲೂಕು ಸಮಾಜ ಕಲ್ಯಾಣ ಇಲಾಖೆಗೆ ಅಧಿಕ್ಷಕರಾಗಿ ನೂತನವಾಗಿ ಆಗಮಿಸಿದ ರಾಜಶೇಖರ ದೈವಾಡಿ ಮಾತನಾಡಿ, ಸಮಾಜ ಕಲ್ಯಾಣ ಎಂಬುದು ಒಂದು ಕುಟುಂಬ ಇದ್ದಂತೆ. ಎಲ್ಲರು ಒಗ್ಗಟ್ಟಿನಿಂದ ಒಂದೇ ಎಂಬ ಭಾವನೆಯೊಂದಿಗೆ ಕರ್ತವ್ಯ ನಿರ್ವಹಿಸಬೇಕು. ಊಹಾಪೋಹಗಳಿಗೆ ಕಿವಿಗೊಡದೆ, ಇಲಾಖೆಗೆ ಕೆಟ್ಟ ಹೆಸರು ತರದ ಹಾಗೆ ಎಲ್ಲರೂ ಉತ್ತಮವಾಗಿ ಕರ್ತವ್ಯ ನಿರ್ವಹಿಸಬೇಕು.ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಂಡು ಹೋಗುವ ಸಹೃದಯಿ ಸಹಾಯಕ ನಿರ್ದೇಶಕರು ಇಲಾಖೆಗೆ ಬಂದಿದ್ದಾರೆ.ಅವರ ಸಲಹೆ,ಸೂಚನೆ,ಮಾರ್ಗದರ್ಶನದಲ್ಲಿ ಗಟ್ಟಿಯಾಗಿ ಕೆಲಸ ಮಾಡಿ ಇಲಾಖೆಗೆ ಹೆಸರು ತರುವ ಕೆಲಸ ಮಾಡೊಣ. ಅಂಬೇಡ್ಕರ ಅವರ ಚಿಂತನೆಗಳನ್ನು ಮೈಗೂಡಿಸಿಕೊಂಡು ಅವರ ಆಸೆ ಈಡೇರಿಸುವ ಕೆಲಸ ನಾವೆಲ್ಲರೂ ಮಾಡೋಣ ಎಂದು ಹೇಳಿದರು. ನಿಲಯ ಪಾಲಕರ ಸಂಘದ ಅಧ್ಯಕ್ಷ ಕೆ.ಬಿ.ಕೊರೆ ಮಾತನಾಡಿದರು.
ಅಶೋಕ ತಳವಾರ, ಪುಂಡಲೀಕ ಗೊಂಧಳಿ, ಹಣಮಂತ ಅರವತ್ತು,ಸಂಗನಬಸು ನಾಗಣಸೂರ, ರಮೇಶ ಬಿರಾದಾರ, ಉಮರ ಮಿರ್ಜಿ, ಸಂತೋಷ ಕುಂಬಾರ,ಪುಂಡಲೀಕ ನಂದಗೊಂಡ, ರವೀಂದ್ರ ಚವ್ಹಾಣ, ಮಹೇಶ ಸೋಲಂಕರ, ಶಿವಾನಂದ ಅಂಗಡಿ, ಸಾವಿತ್ರಿ ಬಿರಾದಾರ,ಜ್ಯೋಗಿ ಔರಸಂಗ, ಶೈಲಾ ಬಗಲಿ, ಜನ್ನತ್ ಮೋಮಿನ, ಯಶೋದಾ ಕುಕನೂರ, ಮಲ್ಲು ವಾಲಿಕಾರ, ಮಹೇಶ ಪೊದ್ದಾರ, ರಾಕೇಶ ಕಾಳೆ, ಶಾರದಾ ಮಾದರ, ರೇಖಾ ಕನ್ನೊಳ್ಳಿ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.
ಇಂಡಿ ಪಟ್ಟಣದಲ್ಲಿರುವ ತಾಲೂಕು ಸಮಾಜ ಕಲ್ಯಾಣ ಇಲಾಖೆಗೆ ಸಹಾಯಕ ನಿರ್ದೇಶರಾಗಿ ನೂತನವಾಗಿ ಆಗಮಿಸಿದ ಉಮೇಶ ಲಮಾಣಿ,ಕಚೇರಿ ಅಧಿಕ್ಷಕ ರಾಜಶೇಖರ ದೈವಾಡಿ ಅವರನ್ನು ಸನ್ಮಾನಿಸಲಾಯಿತು.