ಇಂಡಿ : ಮನೆಯಲ್ಲಿದ್ದ ಸಿಲಿಂಡರ್ ಲಿಕೇಜ್ನಿಂದ ಅನಾಹುತ ಸಂಭವಿಸಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಾಂಬಾ ಗ್ರಾಮದಲ್ಲಿ ನಡೆದಿದೆ. ಗೋವಿಂದ ಗೊಲ್ಲರ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಇದರಿಂದ ಮನೆಯಲ್ಲಿದ್ದ 1 ಲಕ್ಷ ನಗದು ಹಾಗೂ 10 ಗ್ರಾಮ ಚಿನ್ನ ಜೊತೆಗೆ ಬೆಳೆ- ಕಾಳು ಆಹಾರ ಪದಾರ್ಥಗಳು ಬೆಂಕಿಗಾಹುತಿ ಆಗಿದೆ. ಇನ್ನೂ ಘಟನೆ ಬಗ್ಗೆ ಮಾಹಿತಿ ತಿಳಿಸಿದಾಗ ಸ್ಥಳಕ್ಕೆ ಆಗಿಮಸಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅಗ್ನಿ ನಂದಿಸುವ ಕಾರ್ಯಾಚರಣೆ ಮಾಡಿದರು. ಇಂಡಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.