ಆರೋಪಿಗಳನ್ನು ಬಂದಿಸುವಲ್ಲಿ ಪೋಲಿಸ್ ಇಲಾಖೆ ವಿಫಲ; ದಲಿತ ಸಂಘರ್ಷ ಸಮಿತಿ ಪ್ರೊಟೆಸ್ಟ್:
ಬ ಬಾಗೇವಾಡಿ :: ದಲಿತ ಸಂಘರ್ಷ ಸಮಿತಿ ಭೀಮವಾದ ಜಿಲ್ಲಾ ಸಮಿತಿ ವತಿಯಿಂದ ಕೋಲಾರ ತಾಲೂಕಿನ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ 13 ದಿನಗಳಾದರು ಆರೋಪಿಗಳನ್ನು ಬಂದಿಸದ ಪೋಲಿಸ ಇಲಾಖೆಯ ನಿರ್ಲಕ್ಷ್ಯ ಖಂಡಿಸಿ ಭೀಮವಾದ ಕಾರ್ಯಕರ್ತರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನೆಡಸಿದರು.
ನಂತರ ಠಾಣೆಯ ಡಿ ವಾಯ್ ಎಸ್ ಪಿ ಮದ್ಯಸ್ತಿಕೆ ವಹಿಸಿ ಆರೋಪಿಗಳನ್ನು ಎರಡು ದಿನದಲ್ಲಿ ಬಂದಿಸುತ್ತೆವೆ ಎಂದು ಭರವಸೆ ನೀಡಿದರು.
DySP ಅವರ ಭರವಸೆಯ ಮೇರೆಗೆ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದು ಕೂಡಲೆ ಆರೋಪಿಗಳನ್ನು ಬಂದಿಸದಿದ್ದಲ್ಲಿ ಮುಂಬರುವ ದಿನಗಳಲ್ಲಿ ಬೃಹತ್ ಪ್ರತಿಭಟನೆ ಮಾಡುಲಾಗುವುದು. ಅಲ್ಲದೆ ದಲಿತರ ಮೇಲೆ ನಿರಂತರವಾಗಿ ಹಲ್ಲೆ ರಾಜ್ಯದಲ್ಲಿ ನಡೆತಿರಿವುದು ನಾಚಿಕೆಯ ಸಂಗತಿಯಾಗಿದೆ. ಸವರ್ಣಿಯರಿಂದ ಹಲ್ಲೆಗೀಡಾದ ದಲಿತರ ಬಗ್ಗೆ ಪೋಲಿಸ್ ಇಲಾಖೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ಜಿಲ್ಲಾ ಸಂಚಾಲಕ ಯಮನಪ್ಪ ಗುಣಕಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಯಲ್ಲಪ್ಪ ವಾಲಿಕಾರ ಯಮನೇಶ ಹಳ್ಳದಕೇರಿ ಮಾಂತೇಶ ಬಿಜಾಪೂರ ಶಿವಾಜಿ ಜಮಖಂಡಿ ಭೀಮು ಬಬಲೇಶ್ವರ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.