ಶೋಷಣೆ ಮುಕ್ತ ಸಮಾಜ ನಿರ್ಮಾಣ – ರಾಜ್ಯ ಸಂಚಾಲಕ ಎಂ. ಸಿ. ನಾರಾಯಣ್.
ಡಾ ಅಂಬೇಡ್ಕರ್‌ರವರ ಮಾರ್ಗವೊಂದೇ ದಾರಿ – ಡಿ. ಎಸ್. ಎಸ್. ರಾಜ್ಯ ಸಂಚಾಲಕ ಎಂ. ಸಿ. ನಾರಾಯಣ್.
ಜಾನಪದ ಲೋಕದಲ್ಲಿ ನಡೆದ ಜಿಲ್ಲಾ ಸಮಿತಿ ಪದಾಧಿಕಾರಿಗಳ ಆಯ್ಕೆ..
– ಡಿ.ಎಸ್.ಎಸ್. ಭೀಮವಾದ ಸರ್ವ ಸದಸ್ಯರ ಸಂಘಟನೆಯ ಕಾರ್ಯಕ್ರಮ –
ರಾಮನಗರ : ಸಾಮಾಜಿಕ ಸಮಾನತೆಗಾಗಿ ಸಂವಿಧಾನ ಬದ್ದವಾದ ಹಕ್ಕನ್ನು ಪಡೆಯಲು ಶಿಕ್ಷಣ, ಜಾಗೃತಿ, ಸಂಘಟನೆ ಅತೀ ಅವಶ್ಯಕ. ಅದಕ್ಕಾಗಿ ನಮ್ಮಲ್ಲಿರುವ ಕೀಳರಿಮೆಯನ್ನು ತೊಲಗಿಸಿ ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಅವಕಾಶಗಳನ್ನು ಪಡೆಯಬೇಕು. ಅದಕ್ಕಾಗಿ ಈ ಶೋಷಿತ ಸಮುದಾಯದ ಪರವಾಗಿ ಜೀವನದುದ್ದಕ್ಕೂ ಧ್ವನಿ ಪ್ರದರ್ಶನ ಮಾಡಬೇಕು. ಅದಕ್ಕೆ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಮಾರ್ಗದಲ್ಲಿ ನಡೆಯುವುದೊಂದೇ ನಮಗಿರುವ ಏಕೈಕ ಮಾರ್ಗ ಎಂದು ರಾಜ್ಯ ಡಿ ಎಸ್ ಎಸ್ ಸಂಚಾಲಕ ಎಂ.ಸಿ. ನಾರಾಯಣ ಹೇಳಿದರು.
ಹೌದು ರಾಮ ನಗರ ಜಿಲ್ಲೆಯಲ್ಲಿ ನಡೆದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ರಿ)ಭೀಮವಾದ, ಸಂಘಟನೆ ವತಿಯಿಂದ ಜಾನಪದ ಲೋಕದಲ್ಲಿ ಜಿಲ್ಲಾ ಸಮಿತಿಯ ಸರ್ವ ಸದಸ್ಯರ ಸಭೆಯಲ್ಲಿ ಹೇಳಿದರು.
ಇನ್ನೂ ವಿಶ್ವಮಾನವ, ಸಂವಿಧಾನಶಿಲ್ಪಿ, ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾ ರ್ಚನೆ ಮಾಡಿದ ಡಿ.ಎಸ್.ಎಸ್. ಭೀಮವಾದ ನಾಯಕರು ಹಾಗೂ ಕಾರ್ಯಕರ್ತರು, ಬಾಬಾ ಸಾಹೇಬರಿಗೆ ಜಿಂದಾಬಾದ್ ಘೋಷಣೆ ಮೊಳಗಿಸುವ ಮೂಲಕ ಗೌರವ ನಮನ ಸಲ್ಲಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ, ರಾಜ್ಯ, ಡಿ.ಎಸ್.ಎಸ್, ಸಂಚಾಲಕ ಡಿ.ನಾರಾಯಣ್, ಜಿಲ್ಲೆಯಲ್ಲಿ ಸಂಘಟನೆ ಬೆಳೆದು ಬಂದ ಹಾದಿಯ ಬಗ್ಗೆ ವಿಮರ್ಶಿಸಿ,
ಸಂವಿಧಾನ ವಿರೋಧಿ ಚಟುವಟಿಕೆಯಲ್ಲಿ ಯಾವುದೇ ಧರ್ಮ, ಜಾತಿಯ ಸ್ವಯಂ ಘೋಷಿತ ಮುಖಂಡರುಗಳು, ಅವರು ಯಾವತ್ತೂ ಅಂಬೇಡ್ಕರ್ ವಿರೋಧಿಗಳೆಂದು ಮನಗಾಣಬೇಕು. ರಾಜಕೀಯ ನಾಯಕರು, ಸರ್ಕಾರಿ ಅಧಿಕಾರಿಗಳು ನಡೆಸುವ ಕಾನೂನು ವಿರೋಧಿ ಚಟುವಟಿಕೆಗಳಿಗೆ, ಭ್ರಷ್ಟಾ ಚಾರಕ್ಕೆ ಇಂತಹರವನ್ನು ಬಳಸಿಕೊಳ್ಳುತ್ತಾರೆ. ಅಂಬೇಡ್ಕರ್ ವಿರೋಧಿ ನಿಲುವನ್ನು ನಿರಂತರವಾಗಿ ನಡೆಸುತ್ತಾ, ಚಳವಳಿಯನ್ನು ಹತ್ತಿಕ್ಕಲು ಹವಣಿಸುತ್ತಿರುವುದು ಶೋಷಿತ ಸಮುದಾಯದ ಮುಖಂಡರಲ್ಲಿ, ಕಾರ್ಯಕರ್ತರಲ್ಲಿ ಗಂಭೀರ ಚರ್ಚೆಯಾಗುತ್ತಿರುವುದು ಇಂದಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿದೆ. ಆ ನಿಟ್ಟಿನಲ್ಲಿ ಡಿ.ಎಸ್.ಎಸ್. ಭೀಮವಾದ ಸಂಘಟನೆಯನ್ನು ಬಲಗೊಳಿಸಿ, ಬಾಬಾ ಸಾಹೇಬರು ಈ ದೇಶಕ್ಕೆ ನೀಡಿರುವ ಕೊಡುಗೆ ಸಂವಿಧಾನ ವನ್ನು ಉಳಿಸಬೇಕಿರುವುದು ಮಹತ್ತರ ಜವಾಬ್ದಾರಿಯಾಗಿದೆ.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ, ಡಿ.ಎಸ್.ಎನ್. ಭೀಮವಾದ, ಸಮಿತಿ ರಾಜ್ಯ ಸಂಚಾಲಕರಾದ ಎ೦.ಸಿ.ನಾರಾಯಣ್ ರವರು, ಮಾತನಾಡುತ್ತಾ, ಸಂವಿಧಾನದ ಮೂಲಕ ಶೋಷಣೆ ಮುಕ್ತ ಸಮಾಜವನ್ನು ನಿರ್ಮಿಸಲು, ಬಹುಜನ ನಾಯಕ ಡಾ ಬಾಬಾ ಸಾಹೇಬ್ ಅಂಬೇಡ್ಕರವರ ಕ್ರಾಂತಿ ಮಾರ್ಗವನ್ನು ಕರ್ನಾಟಕದಲ್ಲಿ ಪ್ರೊ.ಬಿ.ಕೃಷ್ಣಪ್ಪ ನವರು ಡಿ.ಎಸ್.ಎಸ್. ಚಳವಳಿಯನ್ನು ಹುಟ್ಟುಹಾಕಿದರು.
ಈ ರಾಜ್ಯದಲ್ಲಿ ಚಳವಳಿಯನ್ನು ಮುನ್ನಡೆಸಲು, ರಾಜ್ಯದ 23 ಜಿಲ್ಲೆಗಳಲ್ಲಿ ಸಂಘಟನೆ ಕಾರ್ಯ ಪ್ರವೃತ್ತವಾಗಿದೆ. ರಾಮನಗರ ಜಿಲ್ಲೆಯಲ್ಲಿ ಚಳವಳಿಯನ್ನು ಮುನ್ನಡೆಸುವುದು ಹೊಸತೇನಲ್ಲ. ಹಲವಾರು ನಾಯಕರು ಚಳುವಳಿ ಕಟ್ಟಲು ಪ್ರಯತ್ನ ಮಾಡಿದ್ದಾರೆ. ಆದರೆ, ಬಾಬಾ ಸಾಹೇಬರ ಮಾರ್ಗದಲ್ಲಿ ಚಳವಳಿಯನ್ನು ಮುನ್ನಡೆಸುವಲ್ಲಿ ಮತ್ತು ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಂಘಟನೆಯ ಜಿಲ್ಲಾ ಹಾಗೂ ತಾಲೂಕು ನಾಯಕರುಗಳ ಪಾತ್ರ ಮಹತ್ತರವಾಗಿದೆ. ಆಗ ಮಾತ್ರ ಈ ಜಿಲ್ಲೆಯಲ್ಲಿ ಶಕ್ತಿಯುತವಾಗಿ, ಚಳವಳಿ ಕಟ್ಟಲು ಸಾಧ್ಯವಾಗುತ್ತದೆ. ಎಂದರು.
ಪ್ರಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸಂಚಾಲಕರಾದ ಕೆ.ಶಿವಶಂಕರ್ ರವರು, ಜಿಲ್ಲೆಯ ಎಲ್ಲಾ ತಾಲೂಕು, ಹೋಬಳಿ,. ಗ್ರಾಮ ಪಂಚಾಯ್ತಿ ಕೇಂದ್ರಗಳಲ್ಲಿ, ಡಿ.ಎಸ್.ಎಸ್. ಭೀಮವಾದ ಚಳುವಳಿಯಲ್ಲಿ ತೊಡಗಿಸಿಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ, ತೊಡಗುವಿಕೆ ತುಂಬಾ ಮುಖ್ಯವಾಗಿದೆ. ಎಂದರು.
ಸುಮಾರು ನೂರಾರು ಕಾರ್ಯ ಕರ್ತರು ಭಾಗವಹಿಸಿದ ಈ ಸಭೆಯಲ್ಲಿ ರಾಮನಗರ ಜಿಲ್ಲೆಯ ಭೀಮ್ ಆರ್ಮಿ ಅಧ್ಯಕ್ಷ ಪರಮೇಶ್ ಗೌತಮ್, ಜಿಲ್ಲಾ ಭೀಮಸೇನೆ ಸಂಘಟನೆಯ ಸಂಚಾಲಕ ಸದಾ ಎಸ್ ಕುಮಾರ್ ರವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕರಾದ ಎಂ.ಸಿ. ನಾರಾಯಣ್ ರವರು, ಸರ್ವ ಸದಸ್ಯರ ಸರ್ವಾನುಮತ ಪಡೆದು, ಜಿಲ್ಲಾ ಪದಾಧಿಕಾರಿಗಳನ್ನು ಘೋಷಿಸಿದರು. ರಾಮನಗರ ಡಿ.ಎಸ್.ಎಸ್. ಭೀಮವಾದ ದ ಜಿಲ್ಲಾ ಸಂಚಾಲಕರನ್ನಾಗಿ ಹೊಂಬಯ್ಯನದೊಡ್ಡಿ ಕೆ.ಶಿವಶಂಕರ್, ರವರು, ಜಿಲ್ಲಾ ಮಹಿಳಾ ಒಕ್ಕೂಟದ ಸಂಚಾಲಕಿಯನ್ನಾಗಿ ಗೀತಾ, ಜಿಲ್ಲಾ ಸಂಘಟನಾ ಸಂಚಾಲಕರುಗಳನ್ನಾಗಿ, ಭೈರಲಿಂಗಯ್ಯ, ಶಿವಣ್ಣ, ಶ್ರೀನಿವಾಸ್, ಅನಿಲ್, ಕೆ. ಎಸ್. ಸಿದ್ದರಾಜು ರವರು, ಜಿಲ್ಲಾ ಐಚಾಂಚಿ ಯನ್ನಾಗಿ ರಾಹುಲ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಮುನಿರಾಜು, ಸತೀಶ್, ಸಂಜಯ್ ಕುಮಾರ್ ರವರನ್ನು ನೇಮಿಸಲಾಯಿತು. ಜಿಲ್ಲಾ ಕಾನೂನು ಸಲಹೆಗಾರರನ್ನಾಗಿ ಮುರುಳೀಧರ್ ರವರನ್ನು ಆಯ್ಕೆ ಮಾಡಲಾಯಿತು. ರಾಮನಗರ ತಾಲೂಕು ಸಂಚಾಲಕರನ್ನಾಗಿ ಅಶೋಕ್, ಸಂಘಟನಾ ಸಂಚಾಲಕರುಗಳನ್ನಾಗಿ ಸಿದ್ದರಾಜು, ವೇಣು, ರಂಗಸ್ವಾಮಿ ರವರು ಆಯ್ಕೆಗೊಂಡರು.
ಈ ಸಭೆಯಲ್ಲಿ ಕಾನೂನು ಸಲಹೆಗಾರರಾದ ಮುರುಳೀಧರ್ ರವರು ಎಲ್ಲರನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಣೆ ಮಾಡಿದರು.