ಲಿಂಗಸೂಗೂರು:ತಮಿಳುನಾಡಿನ ಏಷಿಯಾ ವೈದಿಕ ಕಲ್ಚರ್ ರಿಸರ್ಚ್ ಇನ್ವರ್ಸಿಟಿಯಿಂದ ಗೌರವ ಡಾಕ್ಟರೇಟ್ ಗೆ ಭಾಜನರಾಗಿರುವ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದ ಪತ್ರಕರ್ತರಾದ ಡಾ//ಶರಣಯ್ಯ ಒಡೆಯರ್ ರವರಿಗೆ ಪಟ್ಟಣದಲ್ಲಿ ಮಂಗಳವಾರ ಸನ್ಮಾನಿಸಿ ಗೌರವಿಸಲಾಯಿತು.
ಆರ್ ಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಸಿಂದನೂರಿನ ಪಂಪನಗೌಡರು, ಚಂದ್ರಶೇಖರ ರೆಡ್ಡಿ,ಸಿಂದನೂರು ನಗರ ಸಭೆ ಮಾಜಿ ಅಧ್ಯಕ್ಷರಾದ ಜಾಫರ್ ಜಾಗಿರದಾರ್ ಮತ್ತು ಪಟ್ಟಣದ ಉಧ್ಯಮಿಗಳಾದ, ಜೈನ್ ಸಮುದಾಯದ ಮುಖಂಡರಾದ ಸುರೇಶ್ ಸೇಠ್ ಜಾಂಗಡ,ಯುವ ಮುಖಂಡರಾದ ವೀರೇಶ ವಡ್ಡರ್ ರವರ ಬಳಗ ಹಾಗೂ ಮುದಗಲ್ ಹೋಬಳಿ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಶಿವಪ್ಪ ಕೋಟೆ,ನಿರ್ದೇಶಕರಾದ ರವಿಕುಮಾರ ವಡ್ಡರ್, ಮಿಲ್ಲತ್ ಬ್ಯಾಂಕ್ ಅಧ್ಯಕ್ಷ ಹಸನ ಮಿಯಾ ಸೇರಿ ಇನ್ನಿತರರು ಡಾ॥ ಒಡೆಯರ್ ರವರಿಗೆ ಆತ್ಮಿಯವಾಗಿ ಗೌರವಿಸಿದರು.