ಅಕ್ಟೋಬರ್-೬ ಕ್ಕೆ ಇಂಡಿಯಲ್ಲಿ ಬರ ಅಧ್ಯಯನ ತಂಡ ಬೇಟಿ..
ವಿಜಯಪುರ : ಅಕ್ಟೋಬರ್-೬ ಕ್ಕೆ ಕೆಂದ್ರ ಬರ ಅಧ್ಯಯನ ತಂಡ ಜಿಲ್ಲೆಯ ಬಬಲೇಶ್ವರ ಮತ್ತು ಇಂಡಿ ತಾಲ್ಲೂಕಿನ ವಿವಿಧ ಹಳ್ಳಿಗಳಿಗೆ ಬೇಟಿ ನೀಡಿ ಬರ ಅಧ್ಯಯನ ನಡೆಸಲಿದೆ ಎಂದು ಜಿಲ್ಲಾ ಅಧಿಕಾರಿ ಟಿ ಭೂಬಾಲನ್ ತಿಳಿಸಿದ್ದಾರೆ.
ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜೀತ್ ಕುಮಾರ್ ಸಾಹು ನೇತೃತ್ವದ ತಂಡವು ಜಿಲ್ಲೆಗೆ ಆಗಮಿಸಿ ಬಬಲೇಶ್ವರ ಹಾಗೂ ಇಂಡಿ ತಾಲ್ಲೂಕಿನ ವಿವಿಧ ಪ್ರದೇಶಗಳಿಗೆ ಬೇಟಿ ನೀಡಲಿದ್ದಾರೆ.
ತಂಡವು ಅ.6 ರಂದು ಬಬಲೇಶ್ವರ ತಾಲೂಕಿನ ಅರ್ಜುಣಗಿ ಯಲ್ಲಿ ತೊಗರಿ ಹಾಗೂ ಮೆಕ್ಕೆಜೋಳ, ಯಕ್ಕುಂಡಿ ಗ್ರಾಮದಲ್ಲಿ ಕಬ್ಬು ಬೆಳೆ ಹಾಗೂ ಕೆರೆ, ಬಬಲೇಶ್ವರದಲ್ಲಿ ತೊಗರಿ ಬೆಳೆ, ಸಾರವಾಡ ಗ್ರಾಮದಲ್ಲಿ ಈರುಳ್ಳಿ ಹಾಗೂ ಮೆಣಸಿನಕಾಯಿ ಬೆಳೆ ವಿಕ್ಷಣೆ ಮಾಡಲಿದ್ದಾರೆ.
ತದನಂದರ ಇಂಡಿ ತಾಲ್ಲೂಕಿನ ಹೊರ್ತಿ ಗ್ರಾಮದಲ್ಲಿ ಲಿಂಬೆ, ಸಜ್ಜೆ ಹಾಗೂ ಮೆಕ್ಕೆಜೋಳ ಬೆಳೆ ವಿಕ್ಷಣೆ ನಡೆಸಿ ತದನಂತರ ಸಾವಳಸಂಗ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿ ಕೈಗೊಂಡಿರುವ ಅಮೃತ ಸರೋವರ ಅರಣ್ಯ ಕಾಮಗಾರಿ, ಕಪನಿಂಬರಗಿ ಗ್ರಾಮದಲ್ಲಿ ಕೆರೆ ವಿಕ್ಷಣೆ ಮಾಡುತ್ತಾರೆ ಎಂದು ತಿಳಿಸಿದರು.