ನಿಂಬೆನಾಡು ಇಂಡಿ, ಸಿಂದಗಿಯನ್ನು ಬರಗಾಲ ತಾಲೂಕು ಎಂದು ಘೋಷಣೆ ಮಾಡಿ : ಕರವೇ ಕೆಂಗನಾಳ ಆಗ್ರಹ..
ಇಂಡಿ : ಪ್ರಸಕ್ತ ವರ್ಷ ಮುಂಗಾರು ಮಳೆ ಒಂದೂವರೆ ತಿಂಗಳಾದರು ಬರದೇ ಕೈಕೋಟ್ಟಿದರಿಂದ ರೈತಾಪಿ ವರ್ಗ ತುಂಬಾ ಕಷ್ಟದಲ್ಲಿದೆ. ಈ ಭಾಗದ ವಾಣಿಜ್ಯ ಬೆಳೆ ಲಿಂಬೆಗೆ ಸೂಕ್ತ ಬೆಲೆನೂ ಇಲ್ಲ, ಇತ್ತ ಮುಂಗಾರು ಮಳೆನೂ ಇಲ್ಲದ ಕಾರಣ ರೈತರು ಕಂಗಲಾಗಿದ್ದಾರೆ. ಹಾಗಾಗಿ ಕೂಡಲೇ ಸರಕಾರ ಈ ತಾಲೂಕುಗಳನ್ನು ಬರಗಾಲ ಪೀಡಿತ ತಾಲೂಕು ಎಂದು ಘೋಷಣೆ ಮಾಡಿ, ಇಲ್ಲಿನ ವಾಣಿಜ್ಯ ಬೆಳೆ ಲಿಂಬೆಗೆ ಒಂದು ಗಿಡಕ್ಕೆ ಐದು ಸಾವಿರ ಪೋಷಣಾ ಪರಿಹಾರ ಹಾಗೂ ಏಕರೆಗೆ ಹತ್ತು ಸಾವಿರ ಬೆಳೆ ಪರಿಹಾರ ನೀಡಬೇಕು. ಈ ಭಾಗದ ಏತ ನೀರಾವರಿ ಗುತ್ತಿ ಬಸವಣ್ಣ ಕಾಲುವೆಗೆ ಶಾಶ್ವತವಾಗಿ ನೀರು ಹರಿಸಿ ಜನ -ಜಾನುವಾರ ಕುಡಿಯಲಿಕ್ಕೆ ತಕ್ಷಣವೇ ನೀರು ಹರಿಸಬೇಕೆಂದು ಸಾಮಾಜಿಕ ಹೋರಾಟಗಾರ ತಾಂಬಾ ಗ್ರಾಮ ಘಟಕದ ಕರವೇ ಅಧ್ಯಕ್ಷ ಶಿವರಾಜ್ ಕೆಂಗನಾಳ ಪತ್ರಿಕೆ ಪ್ರಕಟಣೆ ಮೂಲಕ ಸರಕಾರಕ್ಕೆ ಆಗ್ರಹಿಸಿದ್ದಾರೆ.