ಉತ್ತರ ಕರ್ನಾಟಕದ ನಾಟಕಗಳು ನೂರಾರು ಕಲಾವಿದರನ್ನು ಪೋಷಿಸಿದ ಪುಣ್ಯ ಭೂಮಿ…!
ರಂಗ ಭೂಮಿ ಉತ್ತರ ಕರ್ನಾಟಕದ ತೋಟಿಲು..!
ಸತ್ಯ ಅಹಿಂಸೆ ತ್ಯಾಗ ಮಹಾತ್ಮನ ಗುಣಗಳು…!
ಇಂಡಿ : ಮಹಾತ್ಮ ಗಾಂಧೀಜಿಯವರು ಮಹಾತ್ಮರಾಗಲು
ಸತ್ಯ ಅಹಿಂಸೆ ತ್ಯಾಗ ಈ ಮೂರು ಗುಣಗಳು ಪ್ರೇರಣೆಯಾಗಿದ್ದವು ಮಹಾತ್ಮ ಗಾಂಧೀಜಿಯವರು ಬಾಲಕನಾಗಿದ್ದಾಗ ಸತ್ಯ ಹರಿಶ್ಚಂದ್ರ ನಾಟಕ ನೋಡಿದ ಪರಿಣಾಮದಿಂದ ಪಡೆದ ವರದಾನಗಳಾಗಿದ್ದವು ಜೆಡಿಎಸ್ ಘೋಷಿತ ಅಭ್ಯರ್ಥಿ ಬಿ.ಡಿ. ಪಾಟೀಲ ಹೇಳಿದರು.
ಚೋರಗಿ ಗ್ರಾಮದ ಶ್ರೀಭಾಗ್ಯವಂತಿ ದೇವಿಯ ಜಾತ್ರಾ ಮಹೋತ್ಸವ ಅಂಗವಾಗಿ ದೈವ ದಾರಿ ತಪ್ಪಿತು..! ಅರ್ಥಾತ್ ಮಾಡಿದ್ದೂಣ್ಣೂ ಮಾರಾಯ ಎಂಬ ಸುಂದರ ಸಾಮಾಜಿಕ ನಾಟಕ ವನ್ನು ಜ್ಯೋತಿಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕ ನಾಟಕಗಳು ನೂರಾರು ಕಲಾವಿದರನ್ನು ಪೋಷಿಸಿದ ಪುಣ್ಯ ಭೂಮಿ. ನಾಟಕಗಳು ಸಮಾಜದ ಸ್ವಾಸ್ಥ್ಯ ಕಾಪಾಡುವ ಮಾದ್ಯಮವಾಗಿ ಕಾರ್ಯಮಾಡಿತ್ತಿರುವುದು ಶ್ಲಾಘನೀಯ ಎಂದರು.
ವೇದಿಕೆ ಮೇಲೆ ಬಿಜೆಪಿ ಜಿಲ್ಲಾ ರೈತ ಮೂರ್ಚ ಅಧ್ಯಕ್ಷ ಕಾಸುಗೌಡ ಬಿರಾದಾರ, ಯುವನಾಯಕ ವಿಠ್ಠಲಗೌಡ ಪಾಟೀಲ, ಗಂಗಾದರಗೌಡ ಬಿರಾದಾರ, ಸಾನಿಧ್ಯವನ್ನು ದುಂಡಯ್ಯ ಹಿರೇಮಠ, ಪಿಡಿಒ ಸಿ ಜಿ ಪಾರೆ, ರಮೇಶಗೌಡ ಬಿರಾದಾರ, ಅಪ್ಪಾಸಾಹೇಬ ಹೊಸಮನಿ, ಬಾಪುರಾಯಗೌಡ ಬಿರಾದಾರ, ರಾಯಪ್ಪ ಹರಳಯ್ಯ ಮುಂತಾದ ನಾಯಕರು ಉಪಸ್ಥಿತರಿದ್ದರು.