ಅಂಬೇಡ್ಕರರ ಈ ಯುಗದ ಶ್ರೇಷ್ಠ
ಮಹಾಮಾನತಾವಾದಿ
ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ವಿಶ್ವಜ್ಞಾನಿ
ಇಂಡಿ : ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಅತ್ಯುತ್ತಮ ಸಂವಿಧಾನ ರಚಿಸಿಕೊಟ್ಟ ಮಹಾನ ಸಂವಿಧಾನ ತಜ್ಞ ಮಹಾಮಾನವತಾವಾದಿ ಡಾ. ಅಂಬೇಡ್ಕರರು, ಅವರು ವಿಶ್ವಜ್ಞಾನಿ. ಭಾರತದ ತಳಸಮುದಾಯಗಳಿಗೆ, ಶೋಷಿತರಿಗೆ ಎಲ್ಲ ರೀತಿಯ ಸಾಮಾಜಿಕ ಸಮಸ್ಯೆಗಳಿಗೆ ಅಂಬೇಡ್ಕರರು ಸಂವಿಧಾನ ನೀಡಿದ್ದಾರೆ ಮತ್ತು ಅವರ ಚಿಂತನೆಗಳು ಎಲ್ಲ ಕಾಲಕ್ಕೂ ಪ್ರಸ್ತುತ ಎಂದು ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲೂಕಾ ಆಡಳಿತ
ವತಿಯಿಂದ ನಡೆದ ಡಾ. ಬಾಬಾ ಸಾಹೇಬ ಅಂಬೇಡ್ಕರವರ ಜನುಮ ದಿನದ ನಿಮಿತ್ಯ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಖಂಡ ವಿನಾಯಕ ಗುಣಸಾಗರ ಮಾತನಾಡಿ
ಭಾರತವು ಸಮಾಜವಾದಿ ಮತ್ತು ಸರ್ವ ಧರ್ಮ
ಸಮಬಾಹುವುಳ್ಳ ರಾಜ್ಯಗಳ ಒಕ್ಕೂಟ ಎಂದು
ನಂಬಿದ್ದ ಅಂಬೇಡ್ಕರರ ಸಂವಿಧಾನದಲ್ಲಿ ಹಾಕಿ
ಕೊಟ್ಟಿರುವ ನಿರ್ದೇಶಕ ತತ್ವಗಳು ಸಮಾಜವಾದ
ತೋರುತ್ತವೆ ಎಂದರು.
ತಹಸೀಲ್ದಾರ ಮಂಜುಳಾ ನಾಯಕ,ಡಿ.ಎಸ್.ಪಿ ಜಗದೀಶ
ಎಚ್.ಆರ್, ಸಮಾಜ ಕಲ್ಯಾಣ ಅಧಿಕಾರಿ ಬಿ.ಜೆ.ಇಂಡಿ
ಅಂಬೇಡ್ಕರರ ಕುರಿತು ಮಾತನಾಡಿದರು. ಸಮಾರಂಭದಲ್ಲಿ ಶಿವಾನಂದ ಮೂರಮನ,ಲಾಯಪ್ಪ ದೊಡಮನಿ ,ರಾಜು ಪಡಗಾನೂರ, ಕಜಾಪ ಅಧ್ಯಕ್ಷ ಆರ್.ವಿ.ಪಾಟೀಲ, ಪೀರಪ್ಪ ಕಟ್ಟಿಮನಿ, ಭೀಮ ಬರಗುಡಿ, ಬಿ.ಎಸ್.ತಳವಾರ, ಹೆಸ್ಕಾ ಎಇಇ ಎಸ್.ಆರ್. ಮೆಂಡೆಗಾರ, ಕೃಷಿ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ, ಜಿ.ಪಂ ಗ್ರಾಮೀಣ ನೀರು ಸರಬರಾಜು ಎಇಇ ಎಸ್.ಆರ್.ರುದ್ರವಾಡಿ ಮತ್ತಿತರಿದ್ದರು.
ಇಂಡಿ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಅಂಬೇಡ್ಕರರ
ಜಯಂತಿಯಲ್ಲಿ ಪೂಜೆ ನೇರವೇರಿಸಿ ಎಸಿ ಅಬೀದ್
ಗದ್ಯಾಳ ಮಾತನಾಡಿದರು.