ಲಿಂಗಸೂಗೂರು: ತಾಲೂಕಿನ ಮುದಗಲ್ ಪಟ್ಟಣದ ವೆಂಕಟರಾಯನ ಪೇಟೆಯ ಗುಡಿ ಶಾಲೆಯ ಹಿಂದೆ ಇರುವಂತಹ ಮೈದಾನದಲ್ಲಿ ಜೈಭೀಮ್ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ॥ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸವಿನೆನಪಿಗಾಗಿ ಹೊನಲು ಬೆಳಕಿನ ಹಾಡ್೯ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿದ್ದು ಈ ಪಂದ್ಯಾವಳಿಯನ್ನು ಎಸ್.ಡಿ. ಎಂ.ಸಿ. ಅಧ್ಯಕ್ಷ ಕಾಶೀಮಪ್ಪ ದೇವರಮನಿ ಅವರು ಉದ್ಘಾಟಿಸಿದರು. ಪಟ್ಟಣದ ಹಿರಿಯ ಆಟಗಾರ ಹಾಗು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಎಸ್.ಎ. ನಯೀಮ್ ಬ್ಯಾಟ್ ಮಾಡುವುದರ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿ ಆಟಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು ಇಂದಿನ ದಿನಮಾನಗಳಲ್ಲಿ ಯುವಕರಿಗೆ ಕ್ರೀಡೆ ಬಹಳ ಮುಖ್ಯವಾಗಿದೆ ಇದರಿಂದ ದೈಹಿಕ ಸಾಮರ್ಥ್ಯ ವೃದ್ದಿಯಾಗುತ್ತದೆ, ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಆಟಗಾರರು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು, ಪಂದ್ಯಾವಳಿಯಲ್ಲಿ ಭಾಗವಹಿಸುವುದು ಮುಖ್ಯ ಸೋಲು ಗೆಲುವು ಕ್ರೀಡೆಯ ಒಂದು ಭಾಗವಾಗಿದೆ ಆಟಗಾರರು ಸೋತೆನೆಂದು ಕುಗ್ಗಬಾರದು ಗೆದ್ದೆನೆಂದು ಹಿಗ್ಗಬಾರದು ಕ್ರೀಡಾ ಮನೋಭಾವದಿಂದ ವರ್ತಿಸಬೇಕು ಯಾವುದೇ ರೀತಿಯ ಜಗಳ ಮಾಡಬಾರದು ಹಾಗೂ ಮುದಗಲ್ ಪಟ್ಟಣದಲ್ಲಿ ಪ್ರಥಮ ಬಾರಿ ಹೊನಲು ಬೆಳಕಿನ ಹಾರ್ಡ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಸಂವಿಧಾನ ಶಿಲ್ಪಿ ಡಾ॥ ಬಾಬಾಸಾಹೇಬ್ ಅಂಬೇಡ್ಕರ್ ಅವರಂತಹ ಮಹಾನ್ ನಾಯಕರ ಹೆಸರಿನಲ್ಲಿ ನಡೆಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಆಯೋಜನೆ ಮಾಡಿರುವ ಜೈ ಭೀಮ್ ಕ್ರಿಕೆಟ್ ಕ್ಲಬ್ ನ ಎಲ್ಲಾ ಸದಸ್ಯರಿಗೆ ಅಭಿನಂದನೆಗಳನ್ನು ಹೇಳಿದರು. ಕಾರ್ಯಕ್ರಮದ ನಿರೂಪಣೆ ರಾಘವೇಂದ್ರ ಕುದರಿ ಅವರು ನೆರವೇರಿಸಿದರು ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಅಜ್ಮೀರ್ ಬೆಳ್ಳಿ ಕಟ್,ತಸ್ಲೀಂ ಮುಲ್ಲಾ, ಡಿ. ಎಸ್.ಎಸ್ ಸಂಚಾಲಕ ಶರಣಪ್ಪ ಕಟ್ಟಿಮನಿ,ನಾಗರಾಜ ತಳವಾರ, ವೆಂಕಟೇಶ ಹಿರೇಮನಿ, ಬಸವರಾಜ ಬಂಕದಮನಿ,ಹಿರಿಯ ಆಟಗಾರ ಶಾನೂರ್,ಹಸನ್ ಕವ್ವಾ, ಮೋಹನ್ ಭಂಡಾರಿ, ಪ್ರತಾಪ್ ಹಿರೇಮನಿ, ಹುಸೇನ್ ಬಾಷಾ, ಹಾಗು ಕ್ರೀಡಾ ಪಟುಗಳು ಉಪಸ್ಥಿತರಿದ್ದರು.