ವಿಜಯಪುರ : ರಷ್ಯಾ ಮತ್ತು ಉಕ್ರೇನ್ ಮಧ್ಯದ ಯುದ್ಧವನ್ನು ನಿಲ್ಲಿಸಿ ಎಂದು SUCI ಕಮ್ಯೂನಿಸ್ಟ್ ಪಕ್ಷದವರು ವಿಜಯಪುರದ ಅಂಬೇಡ್ಕರ್ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದರು. ಯುದ್ಧ ಬೇಡ, ಶಾಂತಿ ಬೇಕು ಎಂದು ರಷ್ಯಾ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಸಾಮ್ರಾಜ್ಯಶಾಹಿ ರಷ್ಯಾ ಮಾರಣ ಹೋಮ ಮಾಡುತ್ತಿದ್ದು ಖಂಡನೀಯ. ಅದಕ್ಕಾಗಿ ಯುದ್ಧ ಬೇಡ, ಶಾಂತಿ ಕಾಪಾಡುವ ಮೂಲಕ ಮಾರಣ ಹೋಮ ತಡೆಗಟ್ಟಬೇಕು ಎಂದು ಒತ್ತಾಯಿಸಿದರು.