ಮಹಾನಗರ ಪಾಲಿಕೆಯ ಸಿಬ್ಬಂದಿಗಳ ಮೇಲೆ ಕೇಸ್ ದಾಖಲು ಏಕೆ ಗೊತ್ತೆ..?
ವಿಜಯಪುರ: ಆಟವಾಡಲು ಹೋಗಿ ಮೂವರು ಮಕ್ಕಳು ಸಾವನಪ್ಪಿದ ಪ್ರಕರಣದಲ್ಲಿ ವಿಜಯಪುರ ನಗರದ ಮಹಾನಗರ ಪಾಲಿಕೆಯ ಸಿಬ್ಬಂದಿಗಳ ಮೇಲೆ ಕೇಸ್ ದಾಖಲಾಗಿದೆ. ಐಪಿಸಿ ಸೆಕ್ಷನ್ 304ಎ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಸಾವನಪ್ಪಿದ ಬಾಲಕ ಮಿಹಿರ ತಂದೆ ಶ್ರೀಕಾಂತ ಜಾನಗೌಳಿ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ.
ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ನಮ್ಮ ಮಕ್ಕಳು ಸಾವನಪ್ಪಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ನಿನ್ನೆ ಚರಂಡಿ ಶುದ್ಧಿಕರಣ ಘಟಕದಲ್ಲಿ ಬಿದ್ದು ಮೂವರು ಮಕ್ಕಳು ಸಾವನಪ್ಪಿದ್ರು. ಆದರ್ಶನಗರ ಪೊಲೀಸ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.