ಅರಣ್ಯ ಇಲಾಖೆಯ ಅಧಿಕಾರಿಗಳಿಂದ ನಾಡದೇವಿಗೆ ಅವಮಾನ
ಇಂಡಿ : ಇಡೀ ರಾಜ್ಯದಾದ್ಯಂತ 69 ನೇ ಕನ್ನಡ ರಾಜ್ಯೋತ್ಸವ ಮನೆ ಮನದಲ್ಲಿ ಹಾಗೂ ಕಛೇರಿಗಳಲ್ಲಿ ಸರಕಾರದ ಮಾರ್ಗ ಸೂಚಿಯಂತೆ ಅದ್ದೂರಿಯಾಗಿ ಮತ್ತು ವಿಜೃಂಭಣೆಯಿಂದ ಜರುಗುತ್ತದೆ. ಆದರೆ ಇಂಡಿ ಪಟ್ಟಣದಲ್ಲಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ನಾಡದೇವಿಯ ಪೂಜೆಯಲ್ಲೂ ಪಾಲ್ಗೊಳ್ಳದೆ ಕೇವಲ ಒಬ್ಬ ದಿನಗೂಲಿ ನೌಕರರಿಂದ ಪೂಜೆ ಸಲ್ಲಿಸಿ ನಾಡದೇವಿಗೆ ಅಪಮಾನ ಗೊಳಿಸಿದ್ದಾರೆಂದು ಕರವೇ ಅಧ್ಯಕ್ಷ ಬಾಳು ಮುಳಜಿ ಆರೋಪಿಸಿ ಆಕ್ರೋಷ ವ್ಯಕ್ತ ಪಡಿಸಿದರು. ಇನ್ನೂ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕೆಂದು ಎಂದು ಜಿಲ್ಲಾ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಶುಕ್ರವಾರ 69 ನೇ ಕನ್ನಡ ರಾಜ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿರುವ ಅರಣ್ಯ ಇಲಾಖೆ ಕಾರ್ಯಾಲಯದಲ್ಲಿ ತಾಲೂಕು ಮಟ್ಟದ ಅಧಿಕಾರಿ, ಪ್ರಥಮ ದರ್ಜೆ ಸಹಾಯಕರು ಮತ್ತು 8 -10 ಜನ ಸರಕಾರಿ ನೌಕರರಿದ್ದರೂ ತಾಯಿ ಭುವನೇಶ್ವರಿ ಪೂಜಾ ಸಮಾಂರಭದಲ್ಲಿ
ಪಾಲ್ಗೊಂಡಿಲ್ಲ ಇದನ್ನು ತೀವ್ರವಾಗಿ ಖಂಡಿಸುತ್ತೆವೆ ಎಂದು ಹೇಳಿದರು.
ಒಬ್ಬ ದಿನಗೊಲಿ ನೌಕರ ಕಡೆಯಿಂದ ನಾಡದೇವಿಗೆ ಪೂಜೆ ಮಾಡಿಸಿ ಕತ್ಯರ್ವಲೋಪ ಎಸಗಿದ ಅಧಿಕಾರಿಗಳನ್ನು ಕೊಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸುತ್ತೆವೆ.
ಇಂದು ಕರ್ನಾಟಕ ರಾಜ್ಯೋತ್ಸವ ರಾಜ್ಯ ವ್ಯಾಪ್ತಿ ರಾಜ್ಯೋತ್ಸವ ಜನರು ಹಾಗೂ ಅಧಿಕಾರಿಗಳು ಸಂಭ್ರಮ ಸಡಗರದಲ್ಲಿ ಇದ್ದಾರೆ. ಸರ್ಕಾರಿ ವೇತನ ಸೌಲಭ್ಯ ಪಡೆದು ಇಂತಹ ಮಹತ್ವದ ಹಬ್ಬ ಆಚರಣೆಗಳನ್ನು ಮಾಡಲು ಒಬ್ಬ ದಿನಗೂಲಿ ನೌಕರ ಕಡೆಯಿಂದ ಪೂಜೆ ಮಾಡಿಸಿದ್ದು, ಯಾವ ನ್ಯಾಯ..? ಸರ್ಕಾರಿ ನಿಯಮಗಳುನ್ನು ಗಾಳಿಗೆ ತೂರಿ, ಮನಸ್ಸಿಗೆ ಬಂದಂತೆ ಅಧಿಕಾರ ನಡೆಸುತ್ತಿದ್ದಾರೆ. ಕನ್ನಡ ನಾಡಿನ ಜನರಿಗೆ ಇಂತಹ ಅಧಿಕಾರ ವರ್ಗದ ಬಾರಿ ಬೇಜಾರು ಪಡುವ ಮತ್ತು ಮುಜುಗರ ಪಡುವ ಸಂದರ್ಭ ಏರ್ಪಡುತ್ತಿದೆ. ಈ ಕೂಡಲೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾ ಅರಣ್ಯ ಇಲಾಖೆ ಕಛೇರಿ ಮುಂದೆ ಧರಣಿ ಸತ್ಯಾಗ್ರ ಮಾಡಲಾಗುವುದು ಎಂದು ಹೇಳಿದರು.