ಡಿ.ಕೆ. ಶಿವಕುಮಾರ್ ಅಧಿಕಾರಾವಧಿ ಸಂಭ್ರಮ: ಮುದ್ದೇಬಿಹಾಳದಲ್ಲಿ NSUI ಹಾಗೂ ಯುವ ಕಾಂಗ್ರೆಸ್‌ನಿಂದ ಪಟಾಕಿ ಸಿಡಿಸಿ ಆಚರಣೆ.
ಮುದ್ದೇಬಿಹಾಳ: ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಅವರು ಯಶಸ್ವಿಯಾಗಿ 6 ವರ್ಷಗಳ ಅಧಿಕಾರ ಪೂರೈಸಿದ ಹಿನ್ನೆಲೆಯಲ್ಲಿ, ಇಂದು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಎನ್ ಎಸ್ ಯು ಐ ಹಾಗೂ ಯುವ ಕಾಂಗ್ರೆಸ್ ಸಂಘಟನೆ ವತಿಯಿಂದ ಅದ್ಧೂರಿ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕರ್ತರು ಬಸವೇಶ್ವರ ವೃತ್ತದಲ್ಲಿ ಕೇಕ್ ಕತ್ತರಿಸಿ, ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ ಪಟಾಕಿ ಸಿಡಿಸಿ ಜಯಘೋಷ ಹಾಕಿದ ಕಾರ್ಯಕರ್ತರು, ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಪಕ್ಷವು ರಾಜ್ಯದಲ್ಲಿ ಮತ್ತಷ್ಟು ಬಲಿಷ್ಠವಾಗಲಿ ಎಂದು ಹಾರೈಸಿದರು.
ಈ ವೇಳೆ ಮಾತನಾಡಿದ ರಾಜ್ಯ ಎನ್ ಎಸ್ ಯುಐ ಪ್ರಧಾನ ಕಾರ್ಯದರ್ಶಿ ಸದ್ದಾಂ ಕುಂಟೋಜಿ, “ಡಿ.ಕೆ. ಶಿವಕುಮಾರ್ ಅವರ ಸಂಘಟನಾ ಶಕ್ತಿಯಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಭದ್ರವಾಗಿ ನೆಲೆಸಿದೆ,” ಎಂದರು.
ಮಾಜಿ ಪುರಸಭೆ ಅಧ್ಯಕ್ಷ ಮಹಿಬೂಬ್ ಗೊಳಸಂಗಿ, ವಿಜಯಪುರ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಫೀಕ್ ಶಿರೋಳ ಮತ್ತು ಯುವ ಕಾಂಗ್ರೆಸ್ ಮುಖಂಡ ಮುತ್ತು ಚಲವಾದಿ ಅವರು ಡಿ.ಕೆ. ಶಿವಕುಮಾರ್ ಅವರ ಸಾಧನೆಗಳನ್ನು ಶ್ಲಾಘಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಉದ್ಯಮಿ ಸಿಕಂದರ್ ಜಾನ್ವೇಕರ, ಯುವ ಕಾಂಗ್ರೆಸ್ ಮುಖಂಡ ಬಾಬಾ ಪಟೇಲ್ ಬಿರಾದಾರ,ಹುಸೇನ್ ಮುಲ್ಲಾ, ರಾಮಣ್ಣಾ ನಾಯಕಮಕ್ಕಳ, ಸಮೀರ್ ದ್ರಾಕ್ಷಿ, ದಾವಲ್ ಗೊಳಸಂಗಿ, ರಂಜಾನ್ ನದಾಫ, ಅಬೂಬಕರ್ ಹಡಗಲಿ, ಕಾಯುಮ್ ಮೊಮಿನ್, ಬಸವರಾಜ ಚಲವಾದಿ, ಚಂದ್ರು ಚಲವಾದಿ, ಯಮನಪ್ಪ, ಅಭಿ ಕಲಾಲ, ಅಬ್ದುಲ್ ಸಲಾಂ ಮುಲ್ಲಾ, ಬಂಧು ಮ್ಯಾಗೇರಿ, ಮಂಜುನಾಥ ಮುರಾಳ, ಪ್ರದೀಪ್ ರಾಥೋಡ್, ಇನಾಯತ್ ಮೊಮಿನ್, ರಾಜು ಪಾಟೀಲ್, ಶೇಖರ್ ಬಿರಾದಾರ ಸೇರಿದಂತೆ ಅನೇಕ NSUI ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.