ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆ ಫಲಿತಾಂಶ, ರ್ಯಾಂಕ ಹೆಚ್ಚಳಕ್ಕೆ ಪಣ
ಮಿಷನ್ ೪೦ ಪ್ಲಸ್ ಅನುಷ್ಠಾನ
ಇಂಡಿ: ಕಲಿಕೆಯಲ್ಲಿ ಹಿಂದುಳಿದ ಎಸ್ಸೆಸ್ಸೆಲ್ಸಿ ಮಕ್ಕಳನ್ನು ಕೇಂದ್ರಿಕರಿಸಿ ತಾಲೂಕು ಸೇರಿದಂತೆ ಜಿಲ್ಲೆಯ ಫಲಿತಾಂಶ ಹೆಚ್ಚಳಕ್ಕೆ ನಡೆಸಲಾಗಿತ್ತಿರುವ ಮಿಷನ್ ೪೦ ಕಾರ್ಯಕ್ರಮಗಳ ಬಗ್ಗೆ ನಿರೀಕ್ಷೆಗಳು ಹೆಚ್ಚಿವೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಸಯಿದಾ ಮುಜಾವರ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಎ.ಓ.ಹೂಗಾರ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ,
ಇದುವರೆಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಇರುತ್ತಿದ್ದ ಪೂರ್ವ ಸಿದ್ದತಾ ಪರೀಕ್ಷಗಳ ಸಂಖ್ಯೆ ಈ ಬಾರಿ ಒಂದರಿAದ ಮೂರಕ್ಕೆ ಹೆಚ್ಚಿವೆ. ವೇಳಾ ಪಟ್ಟಿಯಂತೆ ಪರೀಕ್ಷೆಗಳು ಜರುಗುತ್ತಿದ್ದು ಮೊದಲ ಪರೀಕ್ಷೆ ಜ.೫ ರಿಂದ ಆರಂಭಗೊAಡು ಜ. ೧೦ ರಂದು ಮುಕ್ತಾಯಗೊಂಡಿವೆ. ಎರಡನೆಯ ಪೂರ್ವ ಸಿದ್ದತಾ ಪರೀಕ್ಷೆ ಜ. ೨೭ ರಿಂದ ಶುರುವಾಗಿದ್ದು ಫೆ. ೨ ಕ್ಕೆ ಮುಗಿಯಲಿವೆ. ಮೂರನೇ ಪೂರ್ವ ಸಿದ್ದತಾ ಪರೀಕ್ಷೆ ಫೆ ೨೩ ರಿಂದ ಫೆ ೨೮ ರ ವರೆಗೆ ಜಿಲ್ಲಾದಂತ ನಡೆಯಲಿದೆ. ಎಸ್ಸೆಸ್ಸೆಲ್ಸಿ ಪರೀಕ್ಷಾ ಮಂಡಳಿಯೇ ಈ ಬಾರಿ ಪೂರ್ವ ಸಿದ್ದತಾ ಪ್ರರೀಕ್ಷೆ ಪ್ರಶ್ನೆ ಪತ್ರಿಕೆ ಸಿದ್ದಪಡಿಸಿದೆ.
ಮಿಷನ್ ೪೦ ಕಾರ್ಯಕ್ರಮದಡಿ ಫಲಿತಾಂಶ ಸುಧಾರಣೆಗೆ ನಾನಾ ಕರ್ತು÷್ತ ಮಾಡಲಾಗುತ್ತಿದೆ. ಪ್ರಶ್ನೆ ಕೋಠಿಯನ್ನು ನೀಡಿ ಆಯಾ ವಿಷಯದಲ್ಲಿ ಹೆಚ್ಚು ಅಂಕ ಗಳಿಸುವತ್ತ ಚಿತ್ತ ಹರಿಸಲಾಗಿದೆ.ಪಠ್ಯಾಧಾರಿತ ಮೌಲ್ಯಮಾಪನ ಎಲ್ ಬಿ ಎ ಲೆಸನ್ ಬೇಸ್ಡ ಅಸೆಸ್ ಮೆಂಟ್ ಮಾಡಲಾಗುತ್ತಿದೆ. ೨೯ ಅಂಶಗಳ ಕಾರ್ಯಕ್ರಮ ಅನುಷ್ಠಾನಗೊಳಿಸಿ ಫಲಿತಾಂಶ ಸುಧಾರಣೆಗೆ ಪ್ರಯತ್ನಿಸಲಾಗುತ್ತಿದೆ. ಸರಳ ಪ್ರಶ್ನೆಗಳನ್ನು ಬಿಡಿಸುವ ಮಟ್ಟಿಗೆ ವಿದ್ಯಾರ್ಥಿ ತಯಾರಾಗಿದ್ದಾನೊ ಇಲ್ಲವೋ ಎಂಬುದನ್ನು ಕಾಲಕಾಲಕ್ಕೆ ಅವಲೋಕಿಸಲಾಗುತ್ತಿದೆ.
ಪ್ರತಿವರ್ಷ ತಪ್ಪದೇ ಪರೀಕ್ಷೆಯಲ್ಲಿ ಕೇಳುವ ಪ್ರಬಂಧ ವ್ಯಾಕರಣ, ನಕಾಸೆವಿಜ್ಞಾನದ ನಾನಾ ಚಿತ್ರ ಗಣಿತದಲ್ಲಿ ಹಲವು ಪ್ರಮೇಯಗಳನ್ನು ಬಿಡಿಸುವಷ್ಟು ಮಕ್ಕಳನ್ನು ಸಿದ್ದಗೊಳಿಸಲಾಗುತ್ತಿದೆ. ವಿಶೇಷ ತರಗತಿ, ಗುಂಪು ಅಧ್ಯಯನ ಬಡ್ಡಿ ಪೇರಿಂಗ ಜಾಣರ ಜೋಡಿ ಮಾಡುವದು ಮುಂದುವರೆದಿದೆ. ಪ್ರತಿಯೊಬ್ಬ ವಿದ್ಯಾರ್ಥಿ ಕನಿಷ್ಠ ೪೦ ಅಂಕಗಳೊAದಿಗೆ ತೆರ್ಗಡೆ ಹೊಂದಬೇಕು ಎಬುದು ಇಲಾಖೆಯ ಗುರಿಯಾಗಿದೆ.
ತಾಲೂಕಿನ ಸರಕಾರಿ ಖಾಸಗಿ ಅನುದಾನ ಸಹಿತ ರಹಿತ ಮತ್ತು ವಸತಿ ಶಾಲೆ ವಿದ್ಯಾರ್ಥಿಗಳ ನಿರಂತರ ಶ್ರಮ, ಅವಲೋಕನ ಉತ್ತಮ ಫಲಿತಾಂಶಕ್ಕೆ ದಾರಿ ಮಾಡಕೊಡಲಿದೆ. ಈ ಮಧ್ಯೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯೊಬ್ಬ ಆಂತರಿಕ ಸೇರಿ ಶೇ ೩೩ ರಷ್ಟು ಅಂಕ ಪಡೆದರೆ ಉತ್ತಿರ್ಣಗೊಳ್ಳುವದರಿಂದ ಉತ್ತಮ ಫಲಿತಾಂಶ ಸಾದ್ಯ ಎನ್ನಲಾಗಿದೆ.
ಎ.ಓ.ಹೂಗಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ನೋಡಲ್ ಅಧಿಕಾರಿ ಇಂಡಿ
ಎರಡನೆಯ ಪರೀಕ್ಷೆಗೆ ಕ್ಷೇತ್ರಶಿಕ್ಷಾಧಿಕಾರಿ ಸಯಿದಾ ಮುಜಾವರ, ಎ.ಓ ಹೂಗಾರ ಭೇಟಿ ನೀಡಿರುವದು..


















