ಇಂಡಿಯಲ್ಲಿ ಜೇನು ಕೃಷಿಯ ಜಿಲ್ಲಾ ಮಟ್ಟದ ಕಾರ್ಯಾಗಾರ
ಇಂಡಿ: ಮಾನವ ನಿರ್ಮಿತ ಜೇನುಗುಡಗಳಲ್ಲಿ ಜೇನು
ನೊಣಗಳ ಸಮೂಹಗಳನ್ನು ಅಥವಾ ಜೇನು
ನೊಣಗಳ ಕುಟುಂಬಗಳನ್ನು ಪೋಷಣೆ ಕಡಿಮೆ
ಖರ್ಚಿನಲ್ಲಿ ಮಾಡಿ ಹೆಚ್ಚು ಲಾಭ ಪಡೆಯಬಹುದಾಗಿದೆ ಎಂದು ರಾಷ್ಟ್ರೀಯ ಉತ್ತಮ ಜೇನು ಕೃಷಿ ರೈತ ಪ್ರಶಸ್ತಿ
ವಿಜೇತ ಮಧುಕೇಶ್ವರ ಹೆಗಡೆ ಹೇಳಿದರು. ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಜಯಪುರ ಜಿಲ್ಲಾ ಮಟ್ಟದ ಜೇನು ಕೃಷಿಯ ಸಾಧ್ಯತೆಗಳು ಮತ್ತು ಅವಕಾಶಗಳು ಒಂದು ದಿನದ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಇಂದು ನಾವು ಜೇನು ಬೆಳೆಸಿ ಪರಿಸರ ಉಳಿಸಬೇಕಾಗಿದೆ.
ಮನೆಯಲ್ಲಿ ಹೆಣ್ಣು ಮಾತೆ, ಕೊಟ್ಟಿಗೆಯಲ್ಲಿ ಗೊ ಮಾತೆ
ಮತ್ತು ಪರಿಸರದಲ್ಲಿ ಮಧು ಮಾತೆ ಇದ್ದ ಹಾಗೆ, ಪ್ರಪಂಚದಲ್ಲಿ ಜೇನುಹುಳ ಇಲ್ಲದಿದ್ದರೆ ಮನುಷ್ಯಕುಲದ ಅಂತ್ಯವಾಗಬಹುದು ಎಂದರು. ಜೇನು ನೊಣಗಳು ಬೇರೆ ಬೇರೆ ಪ್ರದೇಶಕ್ಕೆ ಹೋಗಿ ಬೇರೆ ಬೇರೆ ಹೂವಿನ ಮಕರಂದ ಹಿರಿ ಜೇನುತುಪ್ಪ ತಯ್ಯಾರು ಮಾಡುತ್ತಿದ್ದು, ಅದು ನಮ್ಮ ಅನೇಕ ರೋಗ ಹೋಗಲು ಕಾರಣ ವಾಗುತ್ತದೆ ಎಂದು.
ಹೇಳಿದರು. ಶಿರಶಿಯ ಕೆವಿಕೆ ಮುಖ್ಯಸ್ಥೆ ರೂಪಾ ಪಾಟೀಲ ಮಾತನಾಡಿ, ಜೇನು ನೊಣಗಳ ಪ್ರಬೇಧಗಳು, ಜೇನಿನ ಕಾರ್ಯವೈಖರಿ, ಜೀವನ ಚರಿತ್ರೆ ಕುರಿತು ಸವಿಸ್ತಾರವಾಗಿ ರೈತರಿಗೆ ತಿಳಿ ಹೇಳಿದರು.
ವಿಜಯಪುರದ ನಬಾರ್ಢ ಪ್ರಬಂಧಕ ವಿಕಾಸ ರಾಠೋಡ
ಮಾತನಾಡಿ, ರೈತರ ಗುಂಪುಗಳಿಗೆ ಎಫ್‍ಪಿಒ ಗಳಿಗೆ ಈ ಬಾರಿ 3 ಲಕ್ಷ ರೈತರಿಗೆ ಸಹಾಯ ಮಾಡಿದ್ದೇವೆ. ಸೋಸಾಯಿಟಿಯಿಂದ ಬಡ್ಡಿ ರಹಿತ ಸಾಲ ನೀಡಿದ್ದೇವೆ. ರೈತರು ಮುಂದೆ ಬಂದು ಜೇನು ಸಾಗಾಣಿಕೆ ಎಫ್‍ಪಿಒ ಮಾಡಿದರೆ ಸಾಲ ನೀಡುವದಾಗಿ ತಿಳಿಸಿದರು.
ಸಹ ವಿಸ್ತರಣಾ ನಿರ್ದೇಶಕರು ಕೃಷಿ ಇಲಾಖೆ
ವಿಜಯಪುರದ ಆರ್.ಜಿ. ಬೆಳ್ಳಿ, ವಿಜಯಪುರ ಮಹಾಧನ
ಅಗ್ರಿಟೆಕ್ ಲಿಮಿಟೆಡ್ ಕ್ಷೇತ್ರ ಮಾರುಕಟ್ಟೆ ವ್ಯವಸ್ಥಾಪಕ ಜೆ.ಆರ್. ಶ್ರೀನಿವಾಸ, ಇಂಡಿ ಕೃಷಿ ಇಲಾಖೆ ಉಪ
ನಿರ್ದೇಶಕ ಡಾ. ಚಂದ್ರಕಾಂತ ಪವಾರ, ಇಂಡಿ ಕೆವಿಕೆ
ಮುಖ್ಯಸ್ಥ ಡಾ. ಶಿವಶಂಕರ ಮೂರ್ತಿ, ಡಾ. ಹೀನಾ, ಡಾ.
ಪ್ರಕಾಶ ಜಿ, ಡಾ. ವೀಣಾ ಚಂದಾವರಿ ಮಾತನಾಡಿದರು.
ತಾಂತ್ರಿಕ ಗೋಷ್ಠಿಯಲ್ಲಿ ಡಾ. ಶಿವಶಂಕರ ಮೂರ್ತಿ
ಜೇನು ಕೃಷಿ ಯಾಕೆ ಬೇಕು, ಡಾ. ರೂಪಾ ಪಾಟೀಲ ಜೇನಿನ ಪ್ರಭೇಧಗಳು ಶ್ರೀ ಮಧುಕೇಶ್ವರ ಜೇನು
ಕೃಷಿಯ ವಿಧಾನಗಳು ಕುರಿತು ಮಾತನಾಡಿದರು.
ಸಮಾರಂಭದಲ್ಲಿ ರಾಷ್ಟ್ರೀಯ ಕೃಷಿ ರೈತ ಪ್ರಶಸ್ತಿ
ವಿಜೇತ ಭೀರಪ್ಪ ವಗ್ಗಿ, ಎಸ್.ಟಿ. ಪಾಟೀಲ, ಭೂಸಗೊಂಡ
ಮತ್ತಿತರಿದ್ದರು.
ಇಂಡಿ: ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಜಯಪುರ ಜಿಲ್ಲಾ ಮಟ್ಟದ ಜೇನು ಕೃಷಿಯ ಸಾಧ್ಯತೆಗಳು ಮತ್ತು ಅವಕಾಶಗಳು ಒಂದು ದಿನದ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಮಧುಕೇಶ್ವರ ಹೆಗಡೆ ಉದ್ಘಾಟಿಸಿದರು.