ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮಾದರಿ ಪ್ರಾಥಮಿಕ ಶಾಲೆ ಹಿರೇಮಸಳಿ ವಿದ್ಯಾರ್ಥಿಗಳ ಸಾಧನೆ.
ಇಂಡಿ : ವಿಜಯಪುರ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ತಿಕೋಟಾ ತಾಲೂಕಿನ ಶ್ರೀ ಶಾರದಾಂಬ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದು ಸ್ಪರ್ಧೆಯಲ್ಲಿ ಛದ್ಮವೇಶ ವಿಭಾಗದಲ್ಲಿ ಸರಕಾರಿ KBMPS ಹಿರೇಮಸಳಿ ಶಾಲೆಯ ೭ ನೇ ವರ್ಗದ ವಿದ್ಯಾರ್ಥಿ ಪ್ರಥಮ, ಚಿತ್ರಕಲೆ ಸ್ಪರ್ಧೆಯಲ್ಲಿ ಪೂಜಾ ಕ್ಷತ್ರಿ ದ್ವಿತೀಯ ಸ್ಥಾನ, ಧಾರ್ಮಿಕ ಪಠಣ (ಅರೇಬಿಕ್)ವಿಭಾವದಲ್ಲಿ ೫ ನೇ ವರ್ಗದ ವಿದ್ಯಾರ್ಥಿನಿ ಅಪ್ಸನ ಕೊರಬು ದ್ವಿತೀಯ ಸ್ಥಾನ ಪಡೆದು ಶಾಲೆಯ ಹಾಗೂ ಗ್ರಾಮದ ಕೀರ್ತಿ ಹೆಚ್ಚಿಸಿದ್ದಾರೆ. ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸಾಧಗೈದ ಮಕ್ಕಳಿಗೆ ಶಾಲಾ ಮುಖ್ಯ ಗುರುಗಳು ಹಾಗೂ ಸಹ ಶಿಕ್ಷಕರು, ಗುರುಮಾತೆಯರು ಮತ್ತು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರು, ಸರ್ವ ಸದಸ್ಯರು, ತೆನಿಹಳ್ಳಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಎಸ್ ಎಸ್ ಕ್ಯಾತಾ ಅವರು ಅಭಿನಂದನೆ ಸಲ್ಲಿಸಿದ್ದಾರೆ. ತಿರುಪತಿ ವೆಂಕಟರಮಣ ಪಾತ್ರವನ್ನು ತುಂಬಾ ಚೆನ್ನಾಗಿ ಮೂಡಿಬಂದಿರುವದಕ್ಕೆ ನಮ್ಮ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಅರ್ಜುನ ಲಮಾಣಿ, ತಿಕೋಟಾ ತಾಲೂಕ ಪ್ರಾ ಶಾ ಶಿ ಸಂಘದ ಅಧ್ಯಕ್ಷ ಎ ಬಿ ದಡಕೆ, ಪ್ರದಾನ ಕಾರ್ಯದರ್ಶಿ ಅಶೋಕ ಭಜಂತ್ರಿ, GOCC ಬ್ಯಾಂಕಿನ ನಿರ್ಶಕ ಹಣಮಂತ ಕೋಣದಿ, ಆಯ್ ಎ ತೆಲಿ, ಅಶೋಕ ಚನ್ನಬಸಪ್ಪಗೋಳ, ಸಾಬು ಗಗನಮಾಲಿ, ಭಾಗೇವಾಡಿ ತಾಲೂಕ CRP ಆನಂದ ಪವಾರ ಇನ್ನೂ ಅನೇಕರು ಮಕ್ಕಳ ಪ್ರತಿಭೆ ರಾಜ್ಯ ಮಟ್ಟದಲ್ಲಿ ಗುರುತಿಸುವಂತಾಗಲಿ ಎಂದು ಹಾರೈಸಿದ್ದಾರೆ.