ಜಿಲ್ಲಾ ಆಗ್ರಹಿಸಿ ರೈತರಿಂದ ಬೃಹತ್ ಪ್ರತಿಭಟನೆ
ಇಂಡಿ : ಇಂಡಿ ಪ್ರತ್ಯೇಕ ಜಿಲ್ಲೆ ಘೋಷಣೆಗೆ ಆಗ್ರಹಿಸಿ ತಾಲೂಕಿನ ಮಿರಗಿ ಮತ್ತು ಸಾಲೋಟಗಿ ಗ್ರಾಮದ ರೈತರು, ಪಟ್ಟಣದ ತೇಜಸ್ ಸಾಮಾಜಿಕ ಸಾಮಾಜಿಕ ಸಂಘ, ಸಮಗ್ರ ಇಂಡಿ ಕ್ಷೇಮಾಭಿವೃದ್ದಿ ಸಂಘ, ಇಂಡಿ ಜಿಲ್ಲಾ ಹೋರಾಟ ಸಮಿತಿ ಮತ್ತು ಆರ್ಟಿಕಲ್ 371 ಜೆ ಹಕ್ಕು ಒತ್ತಾಯ ಸಮಿತಿ ವತಿಯಿಂದ ಮಿನಿ ವಿಧಾನಸೌಧ ಎದುರು ಪ್ರತಿಭಟನೆ ನಡೆಸಿದರು.
ಕೈಲಾಸಯ್ಯ ಹಿರೇಮಠ ಮಾತನಾಡಿ ಈಗಾಗಲೇ
ಸರಕಾರ ಇಂಡಿ ಜಿಲ್ಲೆ ಮಾಡುವ ಕುರಿತು ಮಾಹಿತಿ
ಸಂಗ್ರಹಿಸುತ್ತಿದೆ. ಅದಲ್ಲದೆ ದೇವರ ಹಿಪ್ಪರಗಿ,
ಸಿಂದಗಿ, ಆಲಮೇಲ,ಇಂಡಿ ಮತ್ತು ಚಡಚಣ ಭಾಗದ
ಪ್ರಮುಖ ಶ್ರೀಗಳನ್ನು , ಮಠಾಧೀಶರನ್ನು, ಗಣ್ಯ ನಾಗರಿಕರ, ರಾಜಕೀಯ ಧುರೀಣರ ಅಭಿಪ್ರಾಯ
ಸಂಗ್ರಹಿಸಲು ಕೇಳಿಕೊಂಡಿದ್ದು ಈ ನಿಟ್ಟಿನಲ್ಲಿ ಕೆಲಸ
ನಡೆಯುತ್ತಿದೆ. ಕಾರಣ ಮಾನ್ಯ ಮುಖ್ಯಮಂತ್ರಿಗಳು ಇಂಡಿ ತಾಲೂಕು ಜಿಲ್ಲೆ ಮಾಡಬೇಕು ಎಂದು ಆಗ್ರಹಿಸಿದರು.
ದೇವೆಂದ್ರ ಬರಡೋಲ ಮಾತನಾಡಿ ಜಿಲ್ಲಾ ಕೇಂದ್ರಕ್ಕೆ ಯೋಗ್ಯವಾದ ಭೌಗೋಳಿಕ ಪ್ರದೇಶ ಮತ್ತು ಸರಕಾರಿ ಕಚೇರಿಗಳನ್ನು ಹೊಂದಿರುವ ಇಂಡಿಯನ್ನು ಜಿಲ್ಲೆಯಾಗಿಸಬೇಕು. ಇಲ್ಲದಿದ್ದರೆ ತಾಲೂಕಿನ ಎಲ್ಲ ಭಾಗದ ರೈತರು ಸಹಕಾರ ಕೋರಿ ಎಲ್ಲರೂ ಒಕ್ಕಟ್ಟಿನಿಂದ ಹೋರಾಟ ಮಾಡುವದಾಗಿ ತಿಳಿಸಿದರು.
ಚನ್ನಪ್ಪ ಶ್ರೀಗಿರಿ ಮಾತನಾಡಿ ಸರಕಾರ ನಮ್ಮ ಮನವಿ ಪರಿಗಣಿಸಿ ಇಂಡಿ ಜಿಲ್ಲಾ ಕೇಂದ್ರ ಘೋಷಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ಸೇರಿದಂತೆ ಉಗ್ರ ಹೋರಾಟ ಮಾಡಲಾಗುವದು ಎಂದರು.
ಹೋರಾಟ ಸಮಿತಿಯ ಮಂಜುನಾಥ ಕಾಮಗೊಂಡ, ಕಾರ್ಯದರ್ಶಿ ಸಂತೋಷ ಪಾಪಣ್ಣನವರ ನಿವೃತ್ತ ಪ್ರಾಚಾರ್ಯ ಎ.ಎಸ್.ಗಾಣಿಗೇರ, ಶ್ರೀಶೈಲ ತೋನಶ್ಯಾಳ, ವಿಠ್ಠಲ ಬೊಳೆಗಾಂವ, ವಿಠ್ಠಲ ಸಾಳುಂಕೆ, ಶಕೀಲ ಮುಲ್ಲಾ,
ಶ್ರೀಶೈಲ ಮಠಪತಿ, ಶರಣು ಬೊರಟಗಿ, ದತ್ತು ಸರ್ ,
ಕೆಪಿಸಿಸಿ ಸದಸ್ಯ ಮಲ್ಲನಗೌಡ ಪಾಟಿಲ, ಶಿವಯೋಗಪ್ಪ
ಜೋತಗೊಂಡ,,ಜೀತಪ್ಪ ಕಲ್ಯಾಣಿ,ಅಪ್ಪು ಅಡಗಲ್ಲ
ಮತ್ತಿತರಿದ್ದರು.
ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ
ಇವರಿಗೆ ಮನವಿ ಸಲ್ಲಿಸಿದರು.
ಇಂಡಿ ಜಿಲ್ಲಾ ಕೇಂದ್ರ ಆಗ್ರಹಿಸಿ ರೈತರು ಪ್ರತಿಭಟನೆ
ನಡೆಸಿ ಎಸಿ ಅಬೀದ್ ಗದ್ಯಾಳ ಇವರಿಗೆ ಮನವಿ ಸಲ್ಲಿಸಿದರು.