ವಿದ್ಯಾರ್ಥಿಗಳಿಗೆ ೧೨೦ ಪ್ಲೇಟ್ ವಿತರಣೆ
ಇಂಡಿ : ಪಟ್ಟಣದ ಬಸ್ ನಿಲ್ದಾಣ ಹತ್ತಿರದ ಉರ್ದು ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಮಕ್ಕಳಿಗೆ ಪಟ್ಟಣದ ಅಂಜುಮನ ಸಂಸ್ಥೆಯ ಉಪಾಧ್ಯಕ್ಷ ಹುಸೇನಿ ಬೇಪಾರಿ ವಿತರಿಸಿದರು.
ಬಿಸಿಊಟದ ಕುರಿತು ಮಕ್ಕಳಿಗೆ ಪ್ಲೇಟಿನಲ್ಲಿ ಊಟ ಮಾಡಲು ಅನುಕೂಲವಾಗಲೆಂದು ೧೨೦ ಪ್ಲೇಟ್ ಗಳನ್ನು ಬೇಪಾರಿಯವರು ದಾನ ರೂಪದಲ್ಲಿ ನೀಡಿದರು.
ಶಾಲೆಯ ಮುಖ್ಯ ಶಿಕ್ಷಕ ಜನಾಬ ಜಮಾಲ ಬಾಬಾನಗರ, ಜನಾಬ ಮೊಹಮ್ಮದ ಯಾಸಿನ ತುರಕಿ, ಹಾಗು ಶಿಕ್ಷಕರ ಬಳಗ ಉಪಸ್ಥಿತರಿದ್ದರು
ಇಂಡಿ ಪಟ್ಟಣದ ಉರ್ದು ಪ್ರಾಥಮಿಕ ಶಾಲೆಗೆ ಹಸನ ಬೇಪಾರಿ ೧೨೦ ಪ್ಲೇಟ್ ನೀಡಿದರು..