ಶಾಂತಿ ಸೌಹಾರ್ದತೆಯಿಂದ ಗಣೇಶ ಮೂರ್ತಿ ವಿಸರ್ಜನೆ ಮಾಡಿ: ವೃತ್ತ ನಿರೀಕ್ಷಕ ಶಶಿಕುಮಾರ್
ಹನೂರು: ಹಬ್ಬಗಳು ಸಂಸ್ಕೃತಿ ಸಂಸ್ಕಾರ ಪರಂಪರೆಯನ್ನು ಉಳಿಸುವ, ಬೆಳೆಸುವಂತಾಗಬೇಕು ವಿನಃ ಶಾಂತಿ ಸೌಹಾರ್ದತೆ ಕದಡುವ ಅಥವಾ ಯಾವುದೇ ಸಮಸ್ಯೆಯನ್ನು ಉಂಟುಮಾಡುವಂತೆ ಆಗಬಾರದು ಒಂದು ವೇಳೆ ಕೆಟ್ಟ ವಿಚಾರಗಳಿಗೆ ಸ್ಪಂದಿಸಿದರೆ ಸರ್ಕಾರದ ನಿಯಮಾನುಸಾರ ಕಾನೂನ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ವೃತ ನಿರೀಕ್ಷಕ ಶಶಿಕುಮಾರ್ ಅವರು ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ವೃತ್ತ ನಿರೀಕ್ಷಕರಾದ ಶಶಿಕುಮಾರ್ ಮಾರ್ಗದರ್ಶನದಲ್ಲಿ ಹನೂರು ಪಟ್ಟಣದಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿಯ ವಿಸರ್ಜನೆಯ ಬಗ್ಗೆ ಸಭೆಯನ್ನು ಏರ್ಪಡಿಸಲಾಗಿತ್ತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಶಿಕುಮಾರ್ ರವರು ಪಟ್ಟಣದಲ್ಲಿ ಇನ್ನೂ ಆರು ಗಣಪತಿಗಳ ವಿಸರ್ಜನೆ ಆಗಬೇಕಿದ್ದು, ವಿಸರ್ಜನೆಯ ಸಮಯದಲ್ಲಿ ಯಾವುದೇ ಗಲಾಟೆ ಗೊಂದಲಗಳು ಆಗದ ರೀತಿಯಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಬೇಕು. ಗಣೇಶ ವಿಸರ್ಜನೆಯ ಸಮಯದಲ್ಲಿ ಯಾವುದಾದರೂ ಗಲಾಟೆ ಸಂಭವಿಸಿದರೆ ಅಂತವರಿಗೆ ನಂತರ ದಿನಗಳಲ್ಲಿ ಯಾವುದೇ ರೀತಿಯ ಅನುಮತಿಯನ್ನು ನೀಡುವುದಿಲ್ಲ. ಗಣೇಶ ವಿಸರ್ಜನೆಯನ್ನು ಸಂಜೆ 6:00 ಒಳಗೆ ವಿಸರ್ಜಿಸಬೇಕು. ಆ ಸಮಯದಲ್ಲಿ ಡಿಜೆ ಗೆ ಅನುಮತಿ ಇರುವುದಿಲ್ಲ ಅದನ್ನು ಬಿಟ್ಟು ತಮಟೆ ನಗಾರಿ ಡೋಲು ಇವುಗಳನ್ನು ಬೇಕಾದರೆ ನೀವು ಉಪಯೋಗಿಸಿಕೊಳ್ಳಬಹುದು. ಭಾನುವಾರದಂದು ಪಟ್ಟಣದಲ್ಲಿರುವ 5 ಗಣೇಶ ವಿಸರ್ಜನೆ ಮಾಡಲಾಗುವುದು, ದೊಡ್ಕೇರಿ ಬೀದಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿಯ ವಿಸರ್ಜನೆಯನ್ನು ಸೋಮವಾರ ಮಾಡುತ್ತೇವೆ ಎಂದು ತಿಳಿಸಿದ್ದೀರಿ ಆದರೆ ಸೋಮವಾರ ಈದ್ ಮಿಲಾದ್ ಇರುವ ಕಾರಣ ನಾವು ಅನುಮತಿ ನೀಡಲು ಸಾಧ್ಯವಿಲ್ಲ ನಮ್ಮ ಮೇಲಾಧಿಕಾರಿಗಳಾದಂತಹ ಪೊಲೀಸ್ ವರಿಷ್ಠಾಧಿಕಾರಿ ಡಾ ಕೆ ಟಿ ಕವಿತಾ ರವರ ಒಪ್ಪಿಗೆಯನ್ನು ಪಡೆದು ನಂತರ ತಿಳಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಇನ್ಸ್ಪೆಕ್ಟರ್ ಶಿವಕುಮಾರ್ ಪೊಲೀಸ್ ಸಿಬ್ಬಂದಿ ವರ್ಗದವರು ಹಾಗೂ ಮಹೇಶ್, ರಾಜು, ಸೋಮಶೇಖರ್, ಅಭಿ, ಗಿರೀಶ್, ಕಾರ್ತಿಕ್, ನಂದೀಶ್, ವೆಂಕಟೇಶ್ ಇನ್ನೂ ಮುಂತಾದವರು ಹಾಜರಿದ್ದರು.
ವರದಿ :ಚೇತನ್ ಕುಮಾರ್ ಎಲ್,ಚಾಮರಾಜನಗರ ಜಿಲ್ಲೆ