ರಾಯಚೂರು: ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಕಾಂಗ್ರೆಸ್ ನ ಸಾಜೀದ್ ಸಮೀರ್ ಅವರ ಬೆಂಬಲಿಸದ ಇಬ್ಬರು ಸದಸ್ಯರ ಎರಡ್ಮೂರು ದಿನದಲ್ಲಿ ಪಕ್ಷದಿಂದ ವಜಾ ಮಾಡದಿದ್ದರೆ ಕಾಂಗ್ರೆಸ್ ನ ಸದಸ್ಯರು ಸಾಮೂಹಿಕ ರಾಜೀನಾಮೆಗೆ ನಿರ್ಧರಿಸ ಲಾಗಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ನರಸಿಂಹಲು ಮಾಡಗಿರಿ, ಸಾಜೀದ್ ಸಮೀರ್ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಪಕ್ಷದ ಅಭ್ಯರ್ಥಿಗೆ ಬೆಂಬಲಿಸದೆ ಗೈರಾದ ಪಕ್ಷದ ನಗರಸಭೆ ಸದಸ್ಯರಾದ ಶಹನಾಜ್ ಬೇಗಂ, ಇ.ವಿನಯ ಕುಮಾರ್ ಅವರನ್ನು ನಾಲ್ಕು ದಿನದಲ್ಲಿ ಜಿಲ್ಲಾಧ್ಯಕ್ಷ ಬಿ.ವಿ.ನಾಯಕರು ಪಕ್ಷದಿಂದ ವಜಾ ಮಾಡಿ, ಪಕ್ಷಾಂತರ ನಿಷೇಧ ಕಾಯಿದೆ ಅಡಿ ಅನರ್ಹ ಗೊಳಿಸದೆ ಹೋದರೆ ಕಾಂಗ್ರೆಸ್ ನ ನಗರಸಭೆಯ ಎಲ್ಲ ಸದಸ್ಯರು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಎಚ್ಚರಿಸಿದರು.
ಅಲ್ಲದೆ ಶಹನಾಜ್ ಬೇಗಂ ಗೈರು ಆಗುವಂತೆ ಕುಮ್ಮಕ್ಕು ನೀಡಿ ಬಿಜೆಪಿಗೆ ಬೆಂಬಲಿಸಿದ ಕೆಪಿಸಿಸಿ ವಕ್ತಾರ ಎ. ವಸಂತ ಕುಮಾರ ವಿರುದ್ದವೂ ಕ್ರಮ ಕೈಗೊಳ್ಳಲು ರಾಜ್ಯಾಧ್ಯಕ್ಷರಿಗೆ ಸಾಕ್ಷಿಯೊಂದಿಗೆ ದೂರು ನೀಡುತ್ತೇವೆ ಎಂದರು.
ಪಕ್ಷೇತರರು ಕಾಂಗ್ರೆಸ್ ಸದಸ್ಯತ್ವ ಪಡೆದಿದ್ದು ಅವರ ವಿರುದ್ದವೂ ಕ್ರಮ ಜರುಗಿಸುವ ಬಗ್ಗೆ ಕಾನೂನು ಸಲಹೆ ಪಡೆಯಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಮಾ.೩೦ ರಂದು ನಡೆದ ನಗರಸಭೆಯ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ನ ಸದಸ್ಯರು ಇಬ್ಬರು ಸದಸ್ಯರು ಗೈರಾಗಿದ್ದರಿಂದ ಬಿಜೆಪಿ ಅಭ್ಯರ್ಥಿ ಲಲಿತಾ ಕಡಗೋಲು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.