ಪಶು ಗಣತಿಗೆ ಡಿಜಿಟಲ್ ಟಚ್
ಇಂಡಿ : ತಾಲೂಕಿನಲ್ಲಿ ಜಾನುವಾರುಗಳಿಗೆ ಗಣತಿ ಕರ‍್ಯ ನ. ೨೫ ರಿಂದ ಡಿ.೫ ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯ ಪಶು ವೈದ್ಯಾಧಿಕಾರಿ ಡಾ. ರಾಜಕುಮಾರ ಅಡಕಿ ಹೇಳಿದರು.
ಅವರು ಪಟ್ಟಣದ ಪಶು ವೈದ್ಯ ಸೇವಾ ಇಲಾಖೆಯಲ್ಲಿ ೨೧ ನೇ ಜಾನುವಾರು ಗಣತಿ ಪ್ರಾರಂಭದಲ್ಲಿ ಮಾತನಾಡಿದರು.
ವಿಶೇಷ ಎಂದರೆ ಇದೇ ಮೊದಲ ಬಾರಿಗೆ ಸ್ಮರ‍್ಟ ಫೋನ ಬಳಸಿ ಜಾನುವಾರು ಗಣತಿ ಮಾಡಲಾಗುತ್ತಿದೆ. ಇದಕ್ಕಾಗಿ ಕೇಂದ್ರ ಪಶು ಸಂಗೋಪನಾ ಸಚಿವಾಲಯ ೨೧ ಫಸ್ಟ ಲೈವ್ ಸ್ಟಾಕ ಸೆನ್ಸಸ್ ಎನ್ನುವ ಪ್ರತ್ಯೇಕ ಮೋಬೈಲ್ ಅಪ್ಲಿಕೆಸನ್ ಅಭಿವೃದ್ದಿ ಪಡಿಸಿದೆ. ಈ ಅಪ್ಲಿಕೆಷನ್ ಬಳಸುವ ಕುರಿತು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಹಿಂದೆ ಪುಸ್ತಕಗಳ ಕಾಲಂ ನಲ್ಲಿ ೨೦೦ ಕಾಲಂಗಳನ್ನು ರ‍್ತಿ ಮಾಡಬೇಕಿತ್ತು. ಈ ಬಾರಿ ಚುಟುಕಾಗಿ ಆಪ್ ಮೂಲಕ ಮಾಹಿತಿ ನಮೂದಿಸಬಹುದು. ನೆಟ್ ರ‍್ಕ ಇಲ್ಲದಿದ್ದರೂ ಈ ಆಪ್ ನೆಟರ‍್ಕ ಪ್ರಧೇಶಕ್ಕೆ ಬರುತ್ತಿದ್ದಂತೆ ಕೇಂದ್ರ ರ‍್ವರ ಜೊತೆ ಮಾಹಿತಿಯನ್ನು ಹಂಚಿಕೊಳ್ಳುವಂತೆ ವಿನ್ಯಾಸ ಪಡಿಸಲಾಗಿದೆ ಎಂದು ಡಾ. ರಾಜಕುಮಾರ ಅಡಕಿ ತಿಳಿಸಿದರು.
ಜಾನುವಾರು ಗಣತಿ ಸಂರ‍್ಭದಲ್ಲಿ ರೈತರ ಮನೆ ಯಲ್ಲಿ ಇರುವ ಜಾನುವಾರುಗಳ ತಳಿ, ವಯಸ್ಸು, ಎಷ್ಟು ರೈತ ಮಹಿಳೆಯರು ಹೈನುಗಾರಿಕೆ,ಕೋಳಿ ಸಾಕಣೆ ಕರ‍್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಈ ಮೂಲಕ ಸರಕಾರಗಳು ಜಾನುವಾರುಗಳ ರೋಗ ನಿಯಂತ್ರಿಸಲು ಗುಣಮಟ್ಟ ಸುಧಾರಿಸಲು ವಿಸ್ತರಣೆ ಅಹಾರ ಪೂರೈಕೆಗೆ ಸಂಬಂದಿಸಿದAತೆ ಮುಂದಿನ ಯೋಜನೆ ಸಿದ್ದಪಡಿಸುವದು ಇದರ ಮುಖ್ಯ ಉದ್ದೇಶವಾಗಿದೆ. ಗೋ ಶಾಲೆ ಗಳಿದ್ದರೆ ಇದರ ಬಗ್ಗೆ ಕೂಡ ಮಾಹಿತಿ ಪಡೆಯಲಾಗುತ್ತದೆ.೧೦ ಕ್ಕಿಂತ ಹೆಚ್ಚು ದನಗಳಿದ್ದರೆ ೧೦೦೦ ಕ್ಕಿಂತ ಹೆಚ್ಚು ಕೋಳಿ ಸಾಕಿದ್ದರೆ ೫೦ ರ ಮೇಲ್ಪಟ್ಟು ಆಡುಗಳನ್ನು ಸಾಕಣೆ ಮಾಡುತ್ತಿದ್ದರೆ ಅವುಗಳನ್ನು ಫಾರಂ ಎಂದು ಪರಿಗಣ ಸಲಾಗುತ್ತಿದೆ ಎನ್ನುತ್ತಾರೆ ಸಿಬ್ಬಂದಿ.
ಜಾನುವಾರು ಗಣತಿ ಪ್ರಮುಖವಾಗಿ ಸಾಕು ಪ್ರಾಣ ಗಳಾದ ಹಸು,ಎತ್ತು, ಎಮ್ಮೆ, ಕುರಿ ಮೇಕೆ ಹಂದಿ ಕುದರೆ ಒಂಟೆ ನಾಯಿ ಮೊಲ ಆನೆ ಮತ್ತು ಕುಕ್ಕುಟಗಳಾದ ಕೋಳಿ, ಬಾತುಕೋಳಿ, ರ‍್ಕಿ ಕೋಳಿಗಳು ಸೇರಿದಂತೆ ಇತರ ಒಟ್ಟು ೧೬ ಜಾತಿಯ ಪ್ರಾಣ ಗಳ ಅಂಕಿ ಸಂಖ್ಯೆಯನ್ನು ಸಂಗ್ರಹಿಸಲಾಗುವದು.ಇದರಲ್ಲಿ ಬೀದಿ ನಾಯಿಗಳು ಹಾಗೂ ಬಿಡಾದಿ ದನಗಳ ಮಾಹಿತಿಯನ್ನು ಗಣತಿ ಮಾಡಲಾಗುವದು ಎಂದು ಅಡಕಿ ತಿಳಿಸಿದ್ದಾರೆ.
ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ ಗಣತಿಗೆ ಚಾಲನೆ ನೀಡಿದರು. ಕರ‍್ಯಕ್ರಮದಲ್ಲಿ ಡಾ. ಪ್ರಕಾಶ ಮರ‍್ಜಿ,ಡಾ. ರಾಜಶೇಖರ ಕಾರಜೋಳ,ಡಾ. ರವಿಶಂಕರ ಬಿರಾದಾರ,ಡಾ. ಅನಿತಾ ಹೊಟಕರ, ಸಿಬ್ಬಂದಿಗಳಾದ ಎಸ್.ಐ.ಮೂಡಲಗಿ, ರಮೇಶ ನರಳೆ,ರಾಮಣ್ಣ ಉಪ್ಪಾರ, ಜಾವೇದ ಬಾಗವಾನ,ರವಿ ಮಲಕಣ್ಣನವರ, ಜಿ.ಆಯ್.ಕರಣೆ, ವಿಶ್ವನಾಥ ಮೊಕಲಾಜಿ ಮತ್ತಿತರಿದ್ದರು.
ಇಂಡಿ ಪಟ್ಟಣದ ಪಶು ಆಸ್ಪತ್ರೆಯಲ್ಲಿ ೨೧ ನೇ ಜಾನುವಾರು ಗಣತಿಗೆ ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ ಚಾಲನೆ ನೀಡಿದರು.