ಧರ್ಮಸ್ಥಳ ಕ್ಷೇತ್ರ ಪಾವಿತ್ಯ ಹಾಳು ಮಾಡುವವರ ಗಡಿಪಾರಿಗೆ ಆಗ್ರಹಿಸಿದ್ದಾರೆ.
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಧರ್ಮಸ್ಥಳದ ಪಾವಿತ್ರ್ಯ, ಹಾಳುಗೆಡವುತ್ತಿರುವ, ಧರ್ಮಾ ಧಿಕಾರಿ ಡಾ ವೀರೇಂದ್ರ ಹೆಗ್ಗಡೆ ಅವರ ವಿನಾಕಾರಣ ಕೆಟ್ಟ ಹೆಸರು ತರುತ್ತಿರುವ ಮಹೇಶ ತಿಮರೊಡ್ಡಿ ಮತ್ತು ಗಿರೀಶ ಮಟ್ಟೆಣ್ಣನವರ ಅವರನ್ನು ರಾಜ್ಯದಿಂದಲೇ ಗಡಿಪಾರು ಮಾಡಬೇಕು ಎಂದು ಅರಿಹಂತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಹಾವೀರ ಸಗರಿ ವಕೀಲರು, ಯಲಗೊಂಡ ಸಾತಿಹಾಳ, ಸಂಗಣ್ಣ ಕುಂಬಾರ ಹಾಗೂ ಜೈನ ಸಮಾಜದ ಮುಖಂಡರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, 800 ವರ್ಷಗಳ ಇತಿಹಾಸ ಇರುವ ಧರ್ಮಸ್ಥಳ ಕ್ಷೇತ್ರ ಮಾನವ ‘ಕುಲಕ್ಕೆ ಶ್ರದ್ಧಾಭಕ್ತಿಯ ಕೇಂದ್ರವಾಗಿದೆ. ದಿನಾಲು ಲಕ್ಷಾಂತರ ಜನರಿಗೆ ತ್ರಿವಿಧ ದಾಸೋಹ ಮಾಡುವ ಈ ಕೇಂದ್ರದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ದುಷ್ಟ ಶಕ್ತಿಗಳನ್ನು ಕ್ಷೇತ್ರ ರಕ್ಷಕ ಮಂಜುನಾಥಸ್ವಾಮಿ, ಅಣ್ಣಪ್ಪಸ್ವಾಮಿ ಭಕ್ತಾದಿಗಳು ವಿರೋ ಧಿಸಬೇಕು ಎಂದಿರುವ ಅವರು, ಹೆಗ್ಗಡೆ ಅವರು ರಾಜ್ಯಾದ್ಯಂತ ಸರ್ವಧರ್ಮಿಯರಿಗೆ ಸೇರಿದ 65 ಸಾವಿರ ದೇವಸ್ಥಾನಗಳ ಜೀರ್ಣೋದ್ಧಾರ ಮಾಡಿದ್ದಾರೆ. ಮತಭೇದ ಮರೆತು ಲಕ್ಷಾಂತರ ಜನರಿಗೆ ಉಚಿತ ಸಾಮೂಹಿಕ ವಿವಾಹ ನಡೆಸಿಕೊಡುತ್ತಿದ್ದಾರೆ. ಇದರಲ್ಲಿ ತಮ್ಮ ಕೈಯಿಂದಲೇ ವಧುಗೆ ಬಂಗಾರದ ತಾಳಿ, ವರನಿಗೆ ಶಾಲು ಪೇಟಾ ಕೊಟ್ಟು ಅವರ ಬಾಳಿಗೆ ಬೇಳಕಾಗುತ್ತಿದ್ದಾರೆ.
ಕೋಟ್ಯಂತರ ಮಹಿಳೆಯರಿಗೆ ರಾಜ್ಯದ ಎಲ್ಲ ತಾಲೂಕು ಕೇಂದ್ರಗಳಲ್ಲಿ ಗ್ರಾಮೀಣ ಅಭಿವೃದ್ಧಿ ಯೋಜನೆ ಉದ್ಯೋಗಗಳನ್ನು ಕೊಟ್ಟು ಅವರ ನಿತ್ಯ ಜೀವನಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಪುಣ್ಯದ ಹೆಗ್ಗಡೆ ಅನೇಕ ಅನುಕೂಲವಾಗುವ ರೈತರಿಗೆ ಕೆರೆ ತುಂಬುವ ಯೋಜನೆ, ರೈತರ ಹಾಲು ಉತ್ಪಾದನ ಕೇಂದ್ರಕ್ಕೆ ಸಹಾಯಧನ, ಸರ್ಕಾರಿ ಶಾಲೆ ಮಕ್ಕಳಿಗೆ ಬೆಂಚ್ ಸೇರಿ ಅನೇಕ ಕೆಲಸಗಳನ್ನು ಮಾಡಿರುವ ಅವರು ಭಕ್ತಾದಿಗಳಿಗೆ ನಡೆದಾಡುವ ದೇವರೆಂದೇ ಭಾವಿತರಾಗಿದ್ದಾರೆ. ದುಷ್ಟಶಕ್ತಿಗಳ ಆರೋಪಕ್ಕೆ ಮಣಿದು ಸರ್ಕಾರ ಎಸ್ ಐಟಿ ರಚಿಸಿ ತನಿಖೆ ನಡೆಸುತ್ತಿದೆ. ದುಷ್ಟಶಕ್ತಿಗಳು ತಮ್ಮ ಬಳಿ ಸಾಕ್ಷಾಧಾರ ಇವೆಯೆಂದು ಹೇಳಿಕೊಳ್ಳುತ್ತಿದ್ದರು. ಇದುವರೆಗೂ ಹಾಜರುಪಡಿಸಿಲ್ಲವೇಕೆ? ಹೆಗ್ಗಡೆಯವರ ಪಾದ ಧೂಳಿಗೆ ಸಮನಲ್ಲದ ಕೆಲವರ ಹೊಲಸು ಬಾಯಿಯಿಂದ ಧರ್ಮಾಧಿಕಾರಿ, ಜೈನ ಸಮುದಾಯದ ವಿರುದ್ಧ ಮಾತನಾಡುತ್ತಿರುವುದು ಸಲ್ಲದು. ಇಂಥ ಹಿಂದು ವಿರೋಧಿ ಶಕ್ತಿಗಳಿಗೆ ವ್ಯಾಪಕ ಪ್ರಚಾರ ನೀಡುತ್ತಿರುವುದನ್ನು ವಿಶ್ವ ಹಿಂದೂ ಪರಿಷತ್ ಸೇರಿ ಅನೇಕ ಹಿಂದೂ ಪರ ಸಂಘಟನೆಗಳು ಉಗ್ರವಾಗಿ ಖಂಡಿಸಿವೆ. ವಿಧಾನಸೌಧಕ್ಕೆ ಬಾಂಬ್ ಇಟ್ಟಅಯೋಗ್ಯ ಪೊಲೀಸ್ ಸೇವೆಯಿಂದ ವಜಾ ಮಾಡಲ್ಪಟ್ಟಿರುವ ಗಿರೀಶನನ್ನು ಮಹೇಶ ಶೆಟ್ಟಿ ತಿಮರೋಡಿಯನ್ನು ರಾಜ್ಯಬಂಧಿಗಳನ್ನಾಗಿಸಲು ಸರ್ಕಾರ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.