ಅಫಜಲಪುರ : ಗ್ರಾಮೀಣ ಅಭಿವೃದ್ಧಿಯ ಧ್ಯೇಯೋದ್ದೇಶ ಇಟ್ಟುಕೊಂಡು ಮಹಿಳೆಯರ ಸಬಲೀಕರಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಧರ್ಮಸ್ಥಳ ಸಂಸ್ಥೆಯ ಸಾಮಾಜಿಕ ಸೇವಾ ಕಾರ್ಯ ಎಲ್ಲರೂ ಮೆಚ್ಚುವಂತದ್ದು ಎಂದು ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಅರುಣಕುಮಾರ ಎಂ ಪಾಟೀಲ ಹೇಳಿದರು.
ಅವರು ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಫಜಲಪುರ ಹಾಗೂ ಸ್ವಸಹಾಯ ಸಂಘಗಳ ಒಕ್ಕೂಟ ಕರಜಗಿ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಅನುದಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸ್ತ್ರೀ ಶಕ್ತಿ ಸಬಲೀಕರಣಕ್ಕೆ ಸಾಲ ಕೊಟ್ಟು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಸಂಸ್ಥೆಯು ಮಾಡುತ್ತಿರುವ ಕಾರ್ಯ ನಿಜಕ್ಕೂ ಒಳ್ಳೆಯದು,
ಯಾವುದೇ ಸರ್ಕಾರಗಳು ಮಾಡದ ಕೆಲಸವನ್ನು ಧರ್ಮಸ್ಥಳ ಸಂಸ್ಥೆಯವರು ಮಾಡುತ್ತಿರುವುದು ತುಂಬಾ ಶ್ಲಾಘನೀಯವಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ವತಿಯಿಂದ ಅಂಗವಿಕಲರಿಗೆ ವಿಧವೆಯರಿಗೆ ಮಾಶಾಸನದ ಚೆಕ್, ಹಾಗೂ ಸ್ತ್ರೀ ಶಕ್ತಿ ಸಂಘದವರಿಗೆ ಅನುದಾನದ ಚೆಕ್ ವಿತರಿಸಲಾಯಿತು.
ವೇದಮೂರ್ತಿ ಹಾಲಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು.ಗ್ರಾಮ ಪಂಚಾಯತ ಅದ್ಯಕ್ಷೆ ಆರತಿ ಬಸವರಾಜ ಜನ್ನಾ ಧರ್ಮಸ್ಥಳ ಸಂಸ್ಥೆ ಪ್ರಾದೇಶಿಕ ನಿರ್ದೇಶಕ ಜಯಂತ ಪೂಜಾರ ತಾಲೂಕು ಯೋಜನಾಧಿಕಾರಿ ಶಿವರಾಜ ಆಚಾರ್ಯ ವಲಯ ಮೇಲ್ವಿಚಾರಕ ಅನೀಲ ದಾವನೆ ಯಲ್ಲಮ್ಮದೇವಿ ಟ್ರಸ್ಟ್ ಅಧ್ಯಕ್ಷ ಮಹಾದೇವಪ್ಪ ಕರೂಟಿ ಧೂಳಪ್ಪ ಬಾಕೆ ಗ್ರಾ,ಪಂ ಸದಸ್ಯ ಲಾಡ್ಲೇಮಶಾಕ ಗೌರ, ಜಟ್ಟೆಪ್ಪ ಭುಯ್ಯಾರ ಪಿ,ಎಲ್ ಡಿ ಬ್ಯಾಂಕ್ ಅಧ್ಯಕ್ಷ ಪುಂಡಲೀಕ ಕಟ್ಟಿ ನಾನಾಗೌಡ ಪಾಟೀಲ ಅಪ್ಪಾಸಾಬ ಹೊಸೂರಕರ ಚಂದ್ರಕಾಂತ ದೈತನ ಮಹಾಂತೇಶ ಕರೂಟಿ ಅಭಿಷೇಕ ಪಾಟೀಲ ಮಾಜೀದ ಪಟೇಲ ಡಾಕಪ್ಪ ಬಲ್ಲಾ ಶ್ರೀಕಾಂತ ನಿವರಗಿ ಪೀರಪ್ಪ ನಾಯಕೋಡಿ ಕಾಶೀನಾಥ ನಿಲಂಗೆ ಗಂಗಾಬಾಯಿ ಯಲ್ಲಮ್ಮ ಪೂಜಾರಿ ಸೇರಿದಂತೆ ಒಕ್ಕೂಟದ ಅಧ್ಯಕ್ಷರು ಸೇವಾಪ್ರತಿನಿಧಿಗಳು ಇದ್ದರು.