ದೇವರಹಿಪ್ಪರಗಿ: ವಿಜಯಪುರ ಜಿಲ್ಲೆಯಲ್ಲೇ ಮುಂದುವರೆಸಲು ಆಗ್ರಹ..!
ದೇವರಹಿಪ್ಪರಗಿ : ಇಂಡಿ ಪ್ರತ್ಯೇಕ ಜಲ್ಲೆಗೆ ಸೇರಿಸಲು ಅನಗತ್ಯ ಪ್ರಸ್ತಾಪ : ಪ್ರಕಾಶ ಸಿಂದಗಿ
ದೇವರಹಿಪ್ಪರಗಿ: ದೇವರಹಿಪ್ಪರಗಿ ತಾಲ್ಲೂಕನ್ನು ವಿಜಯಪುರ ಜಿಲ್ಲೆಯಲ್ಲಿಯೇ ಮುಂದುವರೆಸುವಂತೆ ಆಗ್ರಹಿಸಿ ತಾಲ್ಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ತಹಶೀಲ್ದಾರ ಪ್ರಕಾಶ ಸಿಂದಗಿ ಅವರ ಮೂಲಕ ಇಂಡಿ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ ಕಚೇರಿಗೆ ಶುಕ್ರವಾರ ಆಗಮಿಸಿದ ಪದಾಧಿಕಾರಿಗಳು, ದೇವರಹಿಪ್ಪರಗಿ ತಾಲ್ಲೂಕು, ಜಿಲ್ಲಾ ಕೇಂದ್ರ ವಿಜಯಪುರಕ್ಕೆ 30 ಕಿ.ಮೀಗಳ ಸನಿಹದಲ್ಲಿದೆ. ಅಲ್ಲದೇ ತಾಲ್ಲೂಕಿನ ಬಹುತೇಕ ವ್ಯಾಪಾರ, ವಹಿವಾಟು ವಿಜಯಪುರದೊಂದಿಗಿದೆ. ಈಗ ಕೆಲವು ರಾಜಕೀಯ ನಾಯಕರು, ಸಂಘಟನೆಗಳ ಪ್ರಮುಖರು ಇಂಡಿ ಜಿಲ್ಲಾ ಕೇಂದ್ರ ಸೃಜಿಸುವ ಕುರಿತು ತಮ್ಮ ಹೇಳಿಕೆಗಳನ್ನು ನೀಡುವಾಗ ದೇವರಹಿಪ್ಪರಗಿ ತಾಲ್ಲೂಕು ಸೇರಿಸುವ ವಿಷಯವನ್ನು ಅನಗತ್ಯವಾಗಿ ಪ್ರಸ್ತಾಪಿಸುತ್ತಿದ್ದಾರೆ. ಇದು ವಾಸ್ತವಿಕತೆಗೆ ದೂರವಾಗಿದೆ. ಸರ್ಕಾರ ಇಂಥವರ ಯಾವ ಹೇಳಿಕೆಗಳನ್ನು ಪರಿಗಣಿಸದೇ, ತಾಲ್ಲೂಕಿನ ಜನತೆಯ ಅಭಿಪ್ರಾಯ, ಭೌಗೋಳಿಕ ವಿಚಾರಗಳನ್ನು ಪರಿಗಣಿಸಿ ನಮ್ಮ ತಾಲ್ಲೂಕನ್ನು ವಿಜಯಪುರ ಜಿಲ್ಲೆಯಡಿ ಮುಂದುವರೆಸಬೇಕು ಎಂದರು. ತಹಶೀಲ್ದಾರ ಹಾಗೂ ತಾಲೂಕಾ ಕಾರ್ಯನಿರ್ವಾಹಕ ಸಂಡಾಧಿಕಾರಿಗಳು ದೇವರಹಿಪ್ಪರಗಿ
ತಾಲ್ಲೂಕು ಬಣಜಿಗ ಸಂಘದ ಅಧ್ಯಕ್ಷ ಬಸವರಾಜ ತಾಳಿಕೋಟಿ, ಕಾಶೀನಾಥ ಸಾಲಕ್ಕಿ, ಕೆ.ಎಸ್.ಕೋರಿ, ಕಾಶೀನಾಥ ಕೋರಿ, ಸದಾನಂದ ಪಟ್ಟಣಶೆಟ್ಟಿ, ರಾಜು ಕೋರಿ, ಸಚೀನ್ ಕೋರಿ ಹಾಗೂ ಇತರರು ಇದ್ದರು.