ಚಡಚಣ : ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ಶಿವಾಜಿ ಮಹಾರಾಜರ 395 ನೇ ಜಯಂತಿಯನ್ನು ಆಚರಿಸಲಾಯಿತು. ಈ ವೇಳೆ ಗ್ರಾಂ.ಪಂ.ಸದಸ್ಯ ಭೀರಪ್ಪ ಮಾತನಾಡಿ ಶಿವಾಜಿ ಮಹಾರಾಜರು ರಾಷ್ಟ್ರ ನಿರ್ಮಾಣಕ್ಕೆ ಹಗಲಿರುಳು ಶ್ರಮಿಸಿದವರು. ಹಿಂದೂಸ್ಥಾನವನ್ನು ಒಗ್ಗೂಡಿಸುವಲ್ಲಿ ಶ್ರಮಿಸಿದವರು. ಕೊಂಕಣ ಭಾಗದಲ್ಲಿ ಅನೇಕ ಕೋಟೆ ಕೊತ್ತಲುಗಳನ್ನು ಗೆದ್ದವರಾಗಿದ್ದರು. ಅಲ್ಲದೆ ಅಪ್ರತಿಮ ಹೋರಾಟಗಾರ, ದೇಶಭಕ್ತರಾಗಿದ್ದರು. ಶಿವಾಜಿ ಮಹಾರಾಜರ ಹೆಸರು ಭಾರತದ ಚರಿತ್ರೆಯಲ್ಲಿ ಅಚ್ಚಳಿಯದೇ ಉಳಿದಿದೆ ಎಂದರು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ
ಜಿನ್ನೇಸಾಬ ಭಂಡರಕೋಟೆ, ಚನ್ನು ಒಡ್ಡರ್, ಬೀರಪ್ಪ ಸಲಗರ, ಸಿದ್ದಪ್ಪ ತೇಲಿ, ಶಂಕರ ಯಾದವ್, ಅಮಾಸಿದ್ದ, ಜಾದವ ಮಾರುತಿ ಜಾದವ, ಉಮೇಶ ಶಿಂದೆ, ಭೀಮಾಶಂಕರ್ ನಿಕ್ಕಮ್, ಮಾರುತಿ ಪವಾರ್, ನಾನಸಾಬ ಪವಾರ್, ಭರತೇಶ್ ಪವಾರ್,ವಿಠ್ಠಲ್ ಶಿಂದೆ, ವಿನಾಯಕ ಯಾದವ್, ಆಕಾಶ್, ಅಂಬಾಜಿ ಪವಾರ್, ಶಿವಾಜಿ ಯಾದವ, ಜೈಸಿಂಗ್ ಯಾದವ್, ರಾಮ್ ಕನ್ನೂರ, ಮಹಾದೇವ ಯಾದವ ಉಪಸ್ಥಿತರು.