“ಇಂಡಿ” ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಕರವೇ ಪ್ರತಿಭಟನೆ..!
ಇಂಡಿ: “ಇಂಡಿ” ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಕರವೇ ಪ್ರತಿಭಟನೆ ವಿಶೇಷವಾಗಿತ್ತು..! ಅದು ಏನು ಗೊತ್ತಾ..? ಹೌದು ಇಲ್ಲಿಯವರೆಗೆ ಯಾವುದೇ ಸಂಘಟನೆಗಳು ಒಕ್ಕೊರಲಿನಿಂದ ಇಂಡಿ ಜಿಲ್ಲೆ ಕೇಂದ್ರವಾಗಬೇಕು ಅಂತಾ ಬಯಸಿ ಪ್ರತಿಭಟನೆ ಮಾಡಿದ್ದು ಕಂಡಿದ್ದು ಇರಲಿಲ್ಲ. ಆದರೆ ಪ್ರವೀಣ್ ಶೇಟ್ಟಿ ಬಣದ ಕರವೇ ಕಾರ್ಯಕರ್ತರು ಉಪವಿಭಾಗ ವ್ಯಾಪ್ತಿಯ ಎಲ್ಲಾ ತಾಲ್ಲೂಕಿನ ಅಧ್ಯಕ್ಷರು , ಮುಖಂಡರು ಸೇರಿ ಪ್ರತಿಭಟಿಸಿ ಇಂಡಿ ಉಪ ವಿಭಾಗ ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಜಿಲ್ಲಾ ಕೇಂದ್ರವಾಗಬೇಕು ಎಂದು ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಇಂಡಿ ಪ್ರತ್ಯೇಕ ಜಿಲ್ಲೆಯಾಗುವಂತೆ ಮತ್ತು ಅಖಂಡ ಇಂಡಿ ಸಿಂದಗಿ ತಾಲ್ಲೂಕುಗಳನ್ನು 371 (ಜೆ) ಗೆ ಸೇರಿಸಬೇಕು. ಮತ್ತು ಫೆಬ್ರವರಿ ತಿಂಗಳಲ್ಲಿ ಮಂಡಿ ಸುವ
ಬಜೆಟ್ನಲ್ಲಿ ಈ ಭಾಗಕ್ಕೆ ಹೆಚ್ಚುವರಿ ಅನುದಾನ ನೀಡುವಂತೆ ಒತ್ತಾಯಿಸಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರವೇ ರಾಜ್ಯ ಸಂಚಾಲಕ ಶ್ರೀಶೈಲ
ಮುಳಜಿ, ಕರವೇ ತಾಲೂಕಾಧ್ಯಕ್ಷ ಶಿವಾನಂದ
ಮಲಕಗೊಂಡ, ಫಯಾಜ ಬಾಗವಾನ, ಸದ್ದಾಂ ಆಲಗೂರ, ಅಶೋಕ ಭೂಸನೂರ, ಬಸವರಾಜ ಮಾರಲಭಾವಿ, ಸುನಿಲ್ ಮಾಗಿ ಮಾತನಾಡಿ, ಇಂಡಿ ಕೇಂದ್ರ ಸ್ಥಾನವಾಗಿಟ್ಟುಕೊಂಡು ಜಿಲ್ಲಾ ಕೆಂದ್ರವಾಗಿ ಘೋಷಣೆ ಮಾಡಬೇಕು. ಈಗಾಗಲೆ ಇಂಡಿಯಲ್ಲಿ ಉಪವಿಭಾಗವಿದ್ದು ಬಹುತೇಕ ಜಿಲ್ಲಾ ಮಟ್ಟದ
ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ಅಲ್ಲದೆ ಸಾರಿಗೆ
ವ್ಯವಸ್ಥೆಗಾಗಿ ಎರಡು ಹೆದ್ದಾರಿಗಳು, ರೈಲು ನಿಲ್ದಾಣದ
ವ್ಯವಸ್ಥೆ ಇದೆ. ಸಿಂದಗಿ, ಆಲಮೇಲ, ದೇವರಹಿಪ್ಪರಗಿ, ಚಡಚಣ ತಾಲೂಕುಗಳ ಮಧ್ಯಭಾಗದಲ್ಲಿ ಇಂಡಿ ಇರುವ ಕಾರಣ ಎಲ್ಲ ತಾಲ್ಲೂಕಿನವರಿಗೆ ಬಂದು ತಮ್ಮ ಕೆಲಸ ಕಾರ್ಯ ಮುಗಿಸಿಕೊಂಡು ಹೋಗಲು ಅನುಕೂಲ – ವಾಗುತ್ತದೆ ಎಂದರು. ಕಂದಾಯ ಉಪ ವಿಭಾಗಾಧಿಕಾರಿ ಅಬೀದ್ ಗದ್ಯಾಲ ಮನವಿ ಸ್ವೀಕರಿಸಿ ಮಾತನಾಡಿ, ತಮ್ಮ ಮನವಿಯನ್ನು ಸರಕಾರಕ್ಕೆ ಕಳುಹಿಸಿ ಕೊಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಅಪ್ಪು ಪವಾರ, ಶಿವು ಬಗಲಿ, ಮಾದೇವ ರಾಮಗೊಂಡ, ಮಂಜುನಾಥ ತೇಲಿ, ಮಲ್ಲನಗೌಡ ಪಾಟೀಲ, ರಾಘು ಕೋಣಶಿರಸಗಿ, ದಯಾನಂದ ಉಮರಾಣಿ ಸೇರಿದಂತೆ ಮತ್ತಿತರರಿದ್ದರು.
ಇಂಡಿ: ಇಂಡಿ ಪ್ರತ್ಯೇಕ ಜಿಲ್ಲೆಯಾಗುವಂತೆ ಮತ್ತು ಅಖಂಡ ಇಂಡಿ ಸಿಂದಗಿ ತಾಲ್ಲೂಕುಗಳನ್ನು 371 (ಜೆ) ಗೆ ಸೇರಿಸಬೇಕು. ಮತ್ತು ಫೆಬ್ರವರಿ ತಿಂಗಳಲ್ಲಿ ಮಂಡಿಸುವ ಬಜೆಟ್ನಲ್ಲಿ ಈ ಭಾಗಕ್ಕೆ ಹೆಚ್ಚುವರಿ ಅನುದಾನ ನೀಡುವಂತೆ ಒತ್ತಾಯಿಸಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರಿಗೆ
ಮನವಿ ಸಲ್ಲಿಸಿದರು.