ಕೇಂದ್ರ ಸರ್ಕಾರವು ಈ ಜನವಿರೋಧಿ ಕಾಯ್ದೆಯನ್ನು ಹಿಂಪಡೆದು, ಮನರೇಗಾ ಮರು ಜಾರಿಗೆ ಆಗ್ರಹ..!
Voice of janata DesK News : ದೇಶದ ಲಕ್ಷಾಂತರ ಬಡ ಕುಟುಂಬಗಳಿಗೆ ವರ್ಷವಿಡೀ ಉದ್ಯೋಗ ಒದಗಿಸುತ್ತಾ, ಅವರ ಜೀವನ ನಿರ್ವಹಣೆಗೆ ಆಧಾರವಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ರದ್ದು ಮಾಡಿ, ಕೇಂದ್ರ ಸರ್ಕಾರ ಬಯಸಿದಾಗಷ್ಟೇ ಉದ್ಯೋಗ ನೀಡುವ ‘ವಿಬಿ ಗ್ರಾಮ್ ಜಿ’ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ. ಇದು ಮಹಾತ್ಮ ಗಾಂಧಿಯವರ ಚಿಂತನೆ ಮತ್ತು ಅವರ ಗ್ರಾಮ ಸ್ವರಾಜ್ಯದ ಆಶಯದ ಮೇಲಿನ ಗದಾಪ್ರಹಾರ. ಕೇಂದ್ರ ಸರ್ಕಾರವು ಈ ಜನವಿರೋಧಿ ಕಾಯ್ದೆಯನ್ನು ಹಿಂಪಡೆದು, ಮನರೇಗಾ ಮರು ಜಾರಿ ಮಾಡುವ ವರೆಗೆ ನಾವು ಹೋರಾಟದ ಹಾದಿಯಿಂದ ಹಿಂದೆ ಸರಿಯುವುದಿಲ್ಲ.
ಇಂದು ಕೆಪಿಸಿಸಿ ವತಿಯಿಂದ ಫ್ರೀಡಂ ಪಾರ್ಕ್ ನಲ್ಲಿ ಆಯೋಜಿಸಿದ್ದ “ನರೇಗಾ ಉಳಿಸಿ ಆಂದೋಲನ ಮತ್ತು ಲೋಕಭವನ ಚಲೋ” ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಿ, ಜನರ ಕೂಗಿಗೆ ದನಿಗೂಡಿಸಿದೆ.
ಕೆಪಿಸಿಸಿ ಅಧ್ಯಕ್ಷರಾದ DK Shivakumar, ಮಾಜಿ ಮುಖ್ಯಮಂತ್ರಿ Veerappa Moily, ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ Randeep Singh Surjewala, ಕೆಪಿಸಿಸಿ ಕಾರ್ಯಾಧ್ಯಕ್ಷರಾದ GC Chandrashekhar, ವಿಧಾನ ಪರಿಷತ್ ಮುಖ್ಯ ಸಚೇತಕರಾದ ಸಲೀಂ ಅಹ್ಮದ್ ಸೇರಿ ಹಲವು ಪ್ರಮುಖರು ಪ್ರತಿಭಟನೆಯಲ್ಲಿ ಜತೆಯಾದರು.
Face Book Page :Cm Siddaramay


















