ಶವ ಸಂಸ್ಕಾರ ವೇಳೆ, ಹೆಜ್ಜೇನು ದಾಳಿ ಓರ್ವನ ಸಾವು..!
ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಮಗೆರೆ ಗ್ರಾಮದಲ್ಲಿ ಮೃತ ಮಹಿಳೆಯ ಶವ ಸಂಸ್ಕಾರ ಮಾಡಲು ತೆರಳಿದ್ದ ವೇಳೆಯಲ್ಲಿ ಹೆಜ್ಜೇನು ಹಲವರ ಮೇಲೆ ದಾಳಿ ಮಾಡಿದ್ದು ಓರ್ವ ಸಾವನಪ್ಪಿರುವ ಘಟನೆ ಜರುಗಿದೆ. ಭಾನುವಾರ ಮಧ್ಯಾಹ್ನ 1:30 ಗಂಟೆ ಸಮಯದಲ್ಲಿ ಕಾಮಗೆರೆ ಗ್ರಾಮದ ಮೂಡಲ ಬೀದಿಯ ಮಹಿಳೆಯೊಬ್ಬರ ಶವ ಸಂಸ್ಕಾರ ಮಾಡುವಾಗ ಬೆಂಕಿ ಹಚ್ಚಿದ ಪರಿಣಾಮ ಹೆಜ್ಜೇನು ಸುಮಾರು 30 ಕ್ಕೂ ಹೆಚ್ಚು ಮಂದಿಯ ಮೇಲೆ ದಾಳಿ ಮಾಡಿದೆ 13 ಜನರು ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಂದು ತಿಳಿದು ಬಂದಿದೆ ಚೆನ್ನಪ್ಪ (60)ಎಂಬ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನೆ ಮಾಡುತ್ತಿದ್ದ ಸಂದರ್ಭದಲ್ಲಿ ಮಾರ್ಗ ಮಧ್ಯ ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಹಾಗೂ ತೀವ್ರ ನಿಗಾ ಘಟಕದಲ್ಲಿ ಒಬ್ಬರೂ ಚಿಕಿತ್ಸೆ ಪಡೆಯುತ್ತಿದ್ದೂ ಇನ್ನು 10 ಮಂದಿ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೋಲಿ ಕ್ರಾಸ್ ಆಸ್ಪತ್ರೆ ಆಡಳಿತ ವೈದ್ಯಧಿಕಾರಿಗಳು ಡಾ ಡೆಲಿನ್ ಓರ್ವ ವ್ಯಕ್ತಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಉಳಿದವರು ಮತ್ತೊರ್ವ ವ್ಯಕ್ತಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಚಿಕಿತ್ಸೆ ಪಡೆದುಕೊಂಡು ವಾರ್ಡ್ಗಳಲ್ಲಿದ್ದಾರೆ ಎಂದು ತಿಳಿಸಿದ್ದಾರೆ.