ಜೂ.22ರಂದು ಡಿಸಿಇಟಿ ಪರೀಕ್ಷೆ : ಕೇಂದ್ರದ ಸುತ್ತಲೂ ನಿಷೇಧಾಜ್ಞೆ 144 ಜಾರಿಗೊಳಿಸಿ ಆದೇಶ
ವಿಜಯಪುರ, ಜೂ 21: ಡಿಪ್ಲೋಮಾ 2ನೇ ವರ್ಷದ ಅಥವಾ 3ನೇ ಸೆಮಿಸ್ಟರ್ ಇಂಜಿನೀಯರಿಂಗ್ ಕೊರ್ಸ್‍ಗಳಿಗೆ 2024ನೇ ಸಾಲಿನ ಪ್ರವೇಶಕ್ಕೆ ಡಿಪ್ಲೋಮಾ ಸಾಮಾನ್ಯ ಪ್ರವೇಶ ಪರೀಕ್ಷೆಗಳು ಜೂ.22 ರಂದು ವಿಜಯಪುರ ನಗರದ ಬಾಲಕರ ಸರ್ಕಾರಿ ಪದವಿಪುರ್ವ ಕಾಲೇಜ್‍ನಲ್ಲಿ ಜರುಗಲಿದ್ದು, ಮುನ್ನೆಚ್ಚರಿಕೆಯಾಗಿ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಮಧ್ಯಾಹ್ನ 12-30ರಿಂದ ಪರೀಕ್ಷೆ ಮುಕ್ತಾಯವಾಗುವರೆಗೆ ಕಲಂ 144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಆದೇಶ ಹೊರಡಿಸಿದ್ದಾರೆ.
ಪರೀಕ್ಷಾ ಕೇಂದ್ರದ ಸಮೀಪದಲ್ಲಿರುವ ಝರಾಕ್ಸ್ ಅಂಗಡಿಗಳು, ಕಂಪ್ಯೂಟರ್ ಸೆಂಟರ್‍ಗಳು, ಇಂಟರ್‍ನೆಟ್ ಕೆಫೆಗಳು, ಕೋಚಿಂಗ್ ಕೇಂದ್ರಗಳು ಸದರಿ ಅವಧಿಯಲ್ಲಿ ತೆರೆಯದಂತೆ ಅದೇಶದಲ್ಲಿ ಆದೇಶಿಸಲಾಗಿದೆ.