ಇಂಡಿ : ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಯೋಗ ಶಾಲಾ ತಂತ್ರಜ್ಞರ ಯಾವುದೇ ರೋಗ ಸಂಬಂಧಿಸಿದಂತೆ ಫಲಿತಾಂಶ ಕಂಡುಹಿಡಿಯಲು ತಂತ್ರಜ್ಞರ ಮೊದಲನೆಯ ಪಾತ್ರವಾಗಿದೆ ಎಂದು ಮುಖ್ಯ ವೈದ್ಯಾಧಿಕಾರಿ ಡಾಕ್ಟರ್ ರಾಜೇಶ್ ಕೊಳೇಕರ ಹೇಳಿದರು.
ಇನ್ನೂ ರೋಗಿಯ ಜೊತೆಯಲ್ಲಿ ಇದ್ದುಕೊಂಡು ಕೋವಿಡ್ ಅನ್ನುವಂಥ ಮಹಾಮಾರಿ ಮುಕ್ತ ಮಾಡಲು ಬಹುದೊಡ್ಡ ಪಾತ್ರವಾಗಿದೆ. ಪ್ರಯೋಗಶಾಲಾ ತಂತ್ರಜ್ಞರ ಬಗ್ಗೆ ಎಷ್ಟು ಮಾತನಾಡಿದರು ಕಡಿಮೆ ಆಗಿದೆ. ಅಲ್ಲದೇ, ಯಾವುದೇ ರೋಗ ಕಂಡು ಹಿಡಿಯಲು ಮೊದಲನೆಯ ಪ್ರಯೋಗ ಪ್ರಯೋಗಶಾಲಾ ತಂತ್ರಜ್ಞರು ಆರಂಭಿಸುತ್ತಾರೆ ಎಂದರು. ಎಲ್ಲ ಪ್ರಯೋಗಶಾಲಾ ತಂತ್ರಜ್ಞರಿಗೆ ಅಭಿನಂದನೆಗಳು ಸಲ್ಲಿಸುತ್ತೇನೆ ಎಂದರು.
ಜೊತೆಗೆ ತಂತ್ರಜ್ಞರ ವತಿಯಿಂದ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಹಣ್ಣು ವಿತರಣೆ ಮೂಲಕ ವಿಶ್ವ ಪ್ರಯೋಗಶಾಲಾ ತಂತ್ರಜ್ಞಾನ ದಿನಾಚರಣೆ ಅಂಗವಾಗಿ ಕೋವಿಡ್-19 ನೋಡಲ್ ಅಧಿಕಾರಿ ಡಾಕ್ಟರ್ ರಮೇಶ್ ರಾಠೋಡ್ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಹಿಳಾ ವೈದ್ಯರಾದ ಡಾ. ಪ್ರೀತಿ ಕೊಳೇಕರ್, ಮತ್ತು ಹಿರಿಯ ಪ್ರಯೋಗ ಶಾಲಾ ತಂತ್ರಜ್ಞರಾದ ಶ್ರೀಮಂತ ತೊಳನುರ್, ಕಿರಿಯ ತಂತ್ರಜ್ಞಾನಗಳಾದ H.M. ಕಲಾದಗಿ, ಅನಿತಾ ಪ್ರಭಾಕರ್, ಶೀತಲ್ ಹೋಟ್ಕರ್, ವಿನೋದ್ ಚಿಕ್ಕಮಠ್, ಪ್ರಿಯಾಂಕ ಪೂಳ, ಮಾಂತೇಶ್ ಅಬ್ಜಲ್ಪುರ್, ವಿದ್ಯಾ ಹಳಗುಣಕಿ, ಹಾಗೂ ತರಬೇತಿ ವಿದ್ಯಾರ್ಥಿಗಳು ಮತ್ತಿತರು ಇದ್ದರು.