ಇಂಡಿ : ಕವಿಗಳ ನಾಡು ಸಾಹಿತಿಗಳ ಬೀಡು ನಿಂಬೆ ನಾಡಿನ ಬಬಲಾದ ಗ್ರಾಮದ ವಿಶ್ವಜ್ಞಾನಿ ಗ್ರಂಥಾಲಯ ದಲ್ಲಿ ದ.ರಾ. ಬೇಂದ್ರೇಯವರ 116ನೇ ಜನ್ಮದಿನ ಆಚರಣೆಯನ್ನು ಭಾವಚಿತ್ರ ಪೂಜೆ ಮಾಡುವ ಮೂಲಕ ವಿಠೋಬ ದಶವಂತ ನೆರವೇರಿಸಿದರು. ಕಾರ್ಯಕ್ರಮದ ಉದ್ಘಾಟನೆ ಜ್ಶೋತಿ ಬೆಳಗಿಸುವ ಮೂಲಕ ಸುನೀಲ್, ವಿಠೋಬಾ, ಬಸವರಾಜ,ಅರುಣಕುಮಾರ ದಶವಂತˌ ಸದಾಶಿವ ಸಿಂಗೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮುಖಂಡ ಗಂಗಾರಾಮ ದಶವಂತ ಮಾತನಾಡಿ, ದ.ರಾ. ಬೇಂದ್ರೆ ಕನ್ನಡದ ಪ್ರಸಿದ್ಧ ಕವಿಹಾಗೂ ಕಾದಂಬರಿಕಾರರು. ಬೇಂದ್ರೆಯವರು ಕರ್ನಾಟಕದಲ್ಲಿ ವರಕವಿಯಂದು ಪ್ರಸಿದ್ಧರಾಗಿದ್ದಾರೆ. 1973 ರಲ್ಲಿ, ಬೇಂದ್ರೆಯವರ ಕವನ ಸಂಕಲನವಾದ ನಾಕುತಂತಿಗಾಗಿ ಭಾರತದ ಅತ್ಯುನ್ನತ ಸಾಹಿತ್ಯಪ್ರಶಸ್ತಿಯಾದ ಜ್ಞಾನಪೀಠವನ್ನು ನೀಡಲಾಯಿತು. ಹಾಗೂ ಬೇಂದ್ರೆಯವರು ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದರು.
ಸಾಮಾಜಿಕ ಕಾರ್ಯಕರ್ತ ಪ್ರೀತು ದಶವಂತ ಮಾತಾನಾಡಿ ನಾಕುತಂತಿ ಕೃತಿಗೆ ೧೯೭೪ ರಲ್ಲಿ ಕೇಂದ್ರ ಜ್ಞಾನಪೀಠ ಪ್ರಶಸ್ತಿ ಬಂದಿದೆ. ಕವಿ, ದಾರ್ಶನಿಕ ಬೇಂದ್ರೆ ಈ ಯುಗದ, ಒಬ್ಬ ಮಹಾಕವಿ. ಇವರನ್ನು “ಕನ್ನಡದ ಠಾಗೋರ್” ಎಂದು ಕರೆಯಲಾಗುತ್ತದೆ. ಎಲ್ಲಾ ಕಾಲಕ್ಕೂ ಬಾಳುವಂತಹ ಕವನಗಳನ್ನು ರಚಿಸಿದ ಕೀರ್ತಿ ಅವರದು. ನಾಡಿನ ತುಂಬೆಲ್ಲಾ ನಡೆದಾಡಿದ ಅವರಲ್ಲಿರುವಂತ ಪ್ರತಿಯೊಂದು ಸಾಹಿತ್ಯದ ನುಡಿಗಳು ಮಾನವನ ನಾಡಿ ಮಿಡಿತದಂತೆ ಹರಿದಾಡಿ ಇಡೀ ಕನ್ನಡ ಸಾಹಿತ್ಯ ರಂಗವನ್ನೆ ಶ್ರೀಮಂತಗೊಳಿಸಿವೆ ಎಂದರೆ ತಪ್ಪಲಾಗಲಾರದು. ಆಧ್ಯಾತ್ಮದ ವಿಷಯದಲ್ಲಿ ಒಲವು ಬೆಳೆಸಿಕೊಂಡಿದ್ದವರು. ಅರವಿಂದರ ವಿಚಾರಗಳಲ್ಲಿ ಆಸಕ್ತಿ ತೋರಿದವರು. ಅರವಿಂದರ ಕೃತಿಯನ್ನು ಇಂಗ್ಲೀಷಿನಿಂದ ಭಾಷಾಂತರ ಮಾಡಿಕೊಟ್ಟವರು. ಜಾನಪದ ಧಾಟಿಯ ಅವರ ಎಷ್ಟೋ ಕವಿತೆಗಳನ್ನು ಗಾಯಕರು ಸುಶ್ರಾವ್ಯವಾಗಿ ಹಾಡಿದ್ದಾರೆ. ಅಂತ ಹೇಳಿ ಬೆಂದ್ರೆ ಅವರೂ ಕನ್ನಡ ಸಾಹಿತ್ಶವನ್ನು ಶ್ರೀಮಂತಗೊಳಿಸಿದ ವ್ಶಕ್ತಿ ಅಂತ ಹೇಳಿ ಮಾತು ಮುಗಿಸಿದರು.