ಇಂಡಿಯಲ್ಲಿ ದಲಿತ ಸೇನೆಯ ಪದಾಧಿಕಾರಿಗಳನ್ನು ಆಯ್ಕೆ.
ತಾಲೂಕು ಅಧ್ಯಕ್ಷರಾಗಿ ಮಡೆಪ್ಪ ಆಯ್ಕೆ
ಇಂಡಿ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ರಾಜ್ಯಾಧ್ಯಕ್ಷರ ಆದೇಶದ ಮೆರೆಗೆ ಜಿಲ್ಲಾ ಅಧ್ಯಕ್ಷ ಖಾಜು ಹೊಸಮನಿ ಅವರ ನೇತೃತ್ವದಲ್ಲಿ ತಾಲೂಕ ಪದಾಧಿಕಾರಿಗಳ ಆಯ್ಕೆ ಮಾಡಯಿತು. ನಗರದ ಪ್ರವಾಸಿ ಮಂದಿರದಲ್ಲಿ ದಲಿತ ಸೇನೆ ಜಿಲ್ಲಾ ಅಧ್ಯಕ್ಷ ಖಾಜು ಹೊಸಮನಿ ಅವರು ರಾಜ್ಯ ಅಧ್ಯಕ್ಷ ಹನುಮಂತ ಯಳಸಂಗಿ ಅವರ ಆದೇಶದ ಮೆರೆಗೆ ಇಂಡಿ ತಾಲೂಕ ಅಧ್ಯಕ್ಷರನ್ನಾಗಿ ಮಡೆಪ್ಪ ಚೋರಗಿ, ಉಪ ಅಧ್ಯಕ್ಷರನ್ನಾಗಿ ಸಂದೀಪ್ ಕಾಳೆ ಅವರನ್ನು ಆಯ್ಕೆ ಮಾಡಿಲಾಯಿತು.
ಈ ಸಮಾರಂಭದಲ್ಲಿ. ದಲಿತ ಸೇನೆಯ ಜಿಲ್ಲಾಧ್ಯಕ್ಷ ಖಾಜು ಹೊಸಮನಿ, ಜಿಲ್ಲಾ ಕಾರ್ಯದರ್ಶಿ ಅರವಿಂದ್ ವಠಾರ, ಸುಭಾಷ್ ತಳವಾರ್, ಮಾದೇಶ್, ಅಕ್ಷಯ್ ಹಾದಿಮನಿ, ಸಂತೋಷ್ ಕಾಳೆ, ಸೇರಿದಂತೆ ಇನ್ನೂ ಹಲವಾರು ಕಾರ್ಯಕರ್ತರು ಉಪಸ್ಥಿತಿಯರಿದ್ದರು.