ಇಂಡಿ : ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅಪಮಾನಗೊಳಿಸಿ, ದೇಶದ್ರೋಹ ಚಟುವಟಿಕೆ ಮಾಡಿದಂತಾಗಿದೆ ಎಂದು ನಿಂಬೆ ನಾಡಿನಲ್ಲಿ ಬೃಹತ್ ಪ್ರಮಾಣದ ಪ್ರತಿಭಟನೆ ಮಾಡಲಾಯಿತು. ರಾಯಚೂರು ಜಿಲ್ಲಾ ನ್ಯಾಯಾಧೀಶರನ್ನು ಕೂಡಲೇ ಅಮಾನತುಗೊಳಿಸಿ, ಗಡಿಪಾರು ಮಾಡಬೇಕೆಂದು ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟಿಸಿ ತಹಶಿಲ್ದಾರ ಸಿ.ಎಸ್.ಕುಲಕರ್ಣಿ ಯವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ನಿಂಬೆ ನಾಡಿನ ಇಂಡಿ ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರಾರಂಭಸಿದ ಪ್ರತಿಭಟನೆ, ಪ್ರಮುಖ ಬೀದಿಗಳಲ್ಲಿ ರಾಯಚೂರು ಜಿಲ್ಲಾ ನ್ಯಾಯಾಧೀಶರ ವಿರುದ್ಧ ಘೋಷಣೆ ಕೂಗುತ್ತಾಸಾಗಿ ಅಂಬೇಡ್ಕರ್ ವೃತ್ತಕ್ಕೆ ತೆರಳಿದರು. ತದನಂತರ ಮರು ಬಸವೇಶ್ವರ ವೃತ್ ಕ್ಕೆ ಆಗಮಸಿ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಪ್ರತಿಕೃತಿ ದಹಿಸಿ ಮತ್ತು ಕೆಲ ಕಾಲ ರಸ್ತೆ ತಡೆದು ಮಾನವ ಸರಪಳಿ ನಿರ್ಮಿಸಿ ಮಾಡಿ ಪ್ರತಿಭಟನೆ ಮಾಡಿದರು.
ಈ ಸಂದರ್ಬದಲ್ಲಿ ಜೆಡಿಎಸ್ ಮುಖಂಡ ಬಿ.ಡಿ.ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಲಿಯಾಸ ಬೊರಾಮಣಿ, ಹುಚ್ಚಪ್ಪ ತಳವಾರ, ಅಯೂಬ್ ನಾಟೀಕಾರ, ಅವಿನಾಶ್ ಬಗಲಿ ಮಾತಾನಾಡಿದ ಅವರು, ರಾಷ್ಟ್ರದೊಡ್ಡ ಹಬ್ಬಕ್ಕೆ ಕಾರಣವಾಗಿರುವ, ಜನವರಿ ೨೬ ಗಣರಾಜ್ಯೋತ್ಸವ ದಿನದಂದು ಸಂವಿಧಾನ ಶಿಲ್ಪಿ ಸ್ಮರಿಸುವ ಕೊಳ್ಳುವ ದಿನವೇ, ಕೆಟ್ಟ ಮನಸ್ಥಿತಿಯುಳ್ಳ ರಾಯಚೂರು ಜಿಲ್ಲೆಯ ನ್ಯಾಯಾಧೀಶ ಮಲ್ಲಿಕಾರ್ಜುನಗೌಡರ ನಡಿಗೆ ಇಡೀ ಮಾನವ ಕೂಲವೇ ನಾಚಿಕೆಯಿಂದ ತಲೆತಗ್ಗಿಸುವಂತಾಗಿದೆ ಎಂದರು.
ತದನಂತರ ತಾಲೂಕು ಆಡಳಿತ ಸೌಧಕ್ಕೆ ತೆರಳಿ ಡಿ ಎಸ್ ಎಸ್ ಜಿಲ್ಲಾ ಸಂಚಾಲಕ ವಿನಾಯಕ ಗುಣಸಾಗರ, ಜಟ್ಟಪ್ಪ ರವಳಿ, ಗಣಪತಿ ಬಾಣಿಕೊಲ, ಪ್ರಶಾಂತ ಕಾಳೆ ಮಾತಾನಾಡಿದ ಅವರು, ಮಲ್ಲಿಕಾರ್ಜುನಗೌಡ ನ್ಯಾಯಾಧೀಶರನ್ನು ಕೂಡಲೇ ಸಂವಿಧಾನಾತ್ಮಕ ಹುದ್ದೆಯಿಂದ ವಜಾಗೊಳಿಸಬೇಕು. ಇವರು ಸಂವಿಧಾನ ವಿರೋಧಿ ವ್ಯಕ್ತಿ, ಆ ಸ್ಥಾನದಲ್ಲಿ ಇರಲು ಮತ್ತು ಮುಂದುವರೆಯಲು ಅನರ್ಹರು ಎಂದು ಕಿಡಿಕಾರಿದರು. ಸಂವಿಧಾನ ಕರ್ತೃ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದು ಖಂಡನೀಯ. ಇವರ ಮೇಲೆ ಅಟ್ರಾಸಿಟಿ ಕಾಯ್ದೆಯಡಿ , ಸಮಾಜದಲ್ಲಿ ದ್ವೇಷ ಭಾವನೆ ಹರಡುವಿಕೆ ಮತ್ತು ದೇಶದ್ರೂಹದ ಪ್ರಕರಣ ದಾಖಲಿಸಿ ತಕ್ಷಣವೇ ಜೈಲಿಗೆಟ್ಟಬೇಕು ಎಂದರು. ಜೊತೆಗೆ ನ್ಯಾಯಾಧೀಶ ಆದ ಮೇಲೆ ಸಂಪಾದಿಸಿರುವ ಆಸ್ತಿ ವಿವರ ಪಡೆದು ತನಿಖೆ ನಡೆಸಿ ಅಕ್ರಮ ಸಂಪಾದನೆ ಮುಟ್ಟುಗೋಲು ಹಾಕಬೇಕು ಎಂದು ತೀವ್ರವಾಗಿ ಖಂಡಿಸಿದರು. ಒಂದು ವೇಳೆ ಕ್ರಮ ತೆಗೆದುಕೊಳ್ಳುವಲ್ಲಿ ಅಸಹಾಯಕತೆ ತೋರಿದ್ದರೆ ದೊಡ್ಡ ಪ್ರಮಾಣದ ಪ್ರತಿಭಟನೆಗಳು ಪ್ರಾರಂಭವಾಗುತ್ತೆವೆ ಎಂದು ಎಚ್ಚರಿಕೆ ಸಂದೇಶ ನೀಡಿದರು.
ನಾಗೇಶ ತಳಕೇರಿ ರುಕ್ಮುದ್ದಿನ ತದ್ದೆವಾಡಿ,ಭೀಮಾಶಂಕರ ಮೂರಮನ,ವಿಜು ಮೂರಮನ, ಉಮೇಶ ದೇಗಿನಾಳ, ಸದ್ದಾಂ ಅರಬ, ಸುರೇಶ ನಡಗಡ್ಡಿ, ನಿರ್ಮಲಾ ತಳಕೇರಿ, ರೇಖಾ ಸಿಂಗೆ ಉಪಸ್ಥಿತರು.