ಇಂಡಿ : ಸಂವಿಧಾನ್ ಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ ಬದುಕು, ಹೋರಾಟ, ಸಾಧನೆಗಳು ಇನ್ನೂ ಅನೇಕ ವಿಚಾರಗಳು ಮೆರವಣಿಗೆ ಮತ್ತು ವೇದಿಕೆಯ ಮುಂಖಾಂತರ ವ್ಯಕ್ತವಾದವು. ಹೌದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಅಂಬೇಡ್ಕರ್ ಯುವಕ ಸಂಘದ ಅಡಿಯಲ್ಲಿ ಅಂಬೇಡ್ಕರ್ 131 ಜಯಂತ್ಯೋತ್ಸವ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಬಿ.ಡಿ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭೀಮರಾವ್ ಅಂಬೇಡ್ಕರ್ ಅವರನ್ನು ಬಾಬಾಸಾಹೇಬ್ ಎಂದೂ ಕರೆಯುತ್ತಾರೆ. ಬಾಬಾಸಾಹೇಬರು ಓರ್ವ ಮಹಾನ್ ವ್ಯಕ್ತಿ. ಅವರ ಚಿಂತನೆಗಳು ಇಂದಿಗೂ ಯುವಜನತೆಗೆ ಸ್ಫೂರ್ತಿ ನೀಡುತ್ತಲೇ ಇದೆ. ಬಾಬಾಸಾಹೇಬರು ದೇಶದ ಸಂವಿಧಾನ ರಚನಾಕಾರರು.
ಅಷ್ಟೇ ಅಲ್ಲ, ಜಾತಿ ವ್ಯವಸ್ಥೆಯನ್ನು ಬಲವಾಗಿ ವಿರೋಧಿಸುತ್ತಲೇ ಅದನ್ನು ಸಮಾಜದಿಂದ ನಿರ್ಮೂಲನೆ ಮಾಡಲು ಅಂಬೇಡ್ಕರ್ ಪ್ರಯತ್ನಿಸಿದ್ದರು. ಈ ದಿನವನ್ನು ಭಾರತದಲ್ಲಿ ಸಮಾನತೆ ದಿನ ಮತ್ತು ಜ್ಞಾನ ದಿನ ಎಂದೂ ಕರೆಯಲಾಗುತ್ತದೆ. ಸಂವಿಧಾನ ಶಿಲ್ಪಿಯ ತತ್ವ ಆದರ್ಶಗಳು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ವೇದಿಕೆಯ ಮೇಲೆ ಸದ್ದಾಂ ಅರಬ್, ಅರ್ಜುನ ನೇದಲಗಿ, ಹಣಮಂತ ಗುಡ್ಲ, ಸಿದ್ದು ಡಂಗಾ, ಜೈನುದಿನ ಮುಲ್ಲಾ, ಸುನೀಲ ಡಂಗಿ, ಚಿಮಾಜಿ ತೋರಟ, ಪೈಗಂಬರ ಮಣ್ಣೂರ, ಮಲ್ಲು ಕುಂಬಾರ, ದೂಂಡಬಾ ಮಾನೆ, ಹಣಮಂತ ಬಂಟನೂರ, ಮಾಧವರಾವ್ ಪವಾರ್, ಖಾಜಪ್ಪ ಹೂನಕೋರೆ, ದಯಾನಂದ ಬನಸೋಡೆ, ಮಲ್ಲಿಕಾರ್ಜುನ ಹೂಸಮನಿ, ಸಂಜು ಕಾಂಬಳೆ, ಸುನೀಲ ಬನಸೋಡೆ, ಭಾಷಾ ಇಂಡಿಕರ, ನಿಯಾಝ್ ಅಗರಖೇಡ, ಭೀಮ ಹೂಸಮನಿ, ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು