ಇಂಡಿ : ತೋಟದಲ್ಲಿರುವ ಬಾವಿಯ ಮೋಟಾರ್ ಆನ್ ಮಾಡಲು ಹೋದಾಗ ವಿದ್ಯುತ್ ತಗುಲಿ ಸಹೋದರಿಬ್ಬರು ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಭೈರುಣಗಿ ಗ್ರಾಮದಲ್ಲಿ ನಡೆದಿದೆ. ಮುದ್ದುಗೌಡ ಅಪ್ಪಾಸಾಹೇಬ್ ಪಾಟೀಲ್ ಹಾಗೂ ಶಿವರಾಜ್ ಅಪ್ಪಾಸಾಹೇಬ್ ಪಾಟೀಲ್ ಸಾವನ್ನಪ್ಪಿದ ಸಹೋದರರು. ಇನ್ನೂ ಅಣ್ಣ ಮುದ್ದುಗೌಡ ಮೋಟಾರ್ ಆನ್ ಮಾಡಲು ಹೋದಾಗ ಕರೆಂಟ್ ತಗುಲಿದ್ದು, ಇದನ್ನು ಬಿಡಿಸಲು ಹೋದಾಗ ತಮ್ಮ ಶಿವರಾಜ್‌ಗೂ ವಿದ್ಯುತ್ ತಗುಲಿ ಅಸುನೀಗಿದ್ದಾನೆ. ಝಳಕಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.