ವಿಜಯಪುರ : ಕರ್ಪ್ಯೂ ಜಾರಿಯಲ್ಲಿದ್ರೂ ಮಾತು ಕೇಳದ ಜನಕ್ಕೆ ಪೊಲೀಸರು ಲಾಠಿ ರುಚಿ ತೋರಿಸಿರುವ ಘಟನೆ ವಿಜಯಪುರದ ಗಾಂಧಿಚೌಕ್‌ನಲ್ಲಿ ನಡೆದಿದೆ. ಗಾಂಧಿಚೌಕ ಮಾರ್ಕೆಟ್‌ನಲ್ಲಿ ವಿನಾಕಾರಣ ನಿಯಮ ಮೀರಿ ಟೀ ಮಾರುತ್ತಿದ್ದ ವ್ಯಕ್ತಿಗೆ ಪೊಲೀಸರು ಲಾಠಿ ಏಟು ನೀಡಿದರು. ಅಲ್ಲದೇ, ನಿಯಮ ಮೀರಿ ರಸ್ತೆಗೆ ಇಳಿದಿರುವ ಸವಾರನಿಗೆ ಪೊಲೀಸರು ಲಾಠಿ ಏಟು ನೀಡಿ ವಾರ್ನಿಂಗ್ ನೀಡಿದರು. ಅದಕ್ಕಾಗಿ ಕರ್ಪ್ಯೂ ನಿಯಮ ಪಾಲಿಸದವರಿಗೆ ಪೊಲೀಸರು ಲಾಠಿ ಏಟು ನೀಡುತ್ತಿದ್ದಾರೆ.