ಬಸವನ ಬಾಗೇವಾಡಿ : ಯುವಕರು ದುಶ್ಚಟಕ್ಕೆ ಬಲಿಯಾಗದೇ ಉತ್ತಮ ಹವ್ಯಾಸ ಜತೆಗೆ ಕ್ರೀಡೆಗಳ ಕಡೆಗೆ ಹೆಚ್ಚು ಗಮನ ಹರಿಸುವುದು ಅವಶ್ಯಕವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಗೌರಮ್ಮ ಮುತ್ತತ್ತಿ ಹೇಳಿದರು. ಸ್ಥಳೀಯ ನರಸಲಗಿ ಪ್ರೀಮಿಯರ್ ಲೀಗ್ ಮುತ್ತತ್ತಿ ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟಿಸಿ ಅವರು ಮಾತನಾಡಿದರು. ಯುವಕರು ದೇಶದ ನಿಜವಾದ ಸಂಪತ್ತು. ನಿತ್ಯ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಸ್ಥೈರ್ಯ ಹೆಚ್ಚುತ್ತದೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸಿರ್ ಸೇಟ್ ಬೇಪಾರಿ, ಗ್ರಾಮದ ಹಿರಿಯರು ಶಾಂತಗೌಡ ಹೊಸಳ್ಳಿ, ಅಹಿಂದ ಯುವ ಮುಖಂಡ ಮುತ್ತುರಾಜ ಹಾಲಿಹಾಳ, ಪ್ರಕಾಶ ಗುಡಿಮನಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕಸ್ತೂರಿ ಲಮಾಣಿ, ಸದಸ್ಯ ಬಸವರಾಜ ಸಗರನಾಳ, ಮಾಂತೇಶ ಹಾಲಿಹಾಳ, ನಾಮದೇವ ರಾಠೋಡ, ರಾಜಶೇಖರ ಹುಲ್ಲೂರ, ಡಿ ಎಸ್ ಎಸ್ ಮುಖಂಡ ಅಶೋಕ ಚಲವಾದಿ, ಗುರು ಗುಡಿಮನಿ, ಕೋಮಲ್ ಲಮಾಣಿ, ಮಾತೇಶ ಚಕ್ರವರ್ತಿ, ಮೌಲಾಲಿ ಚಪ್ಪರಬಂದ, ಮಲ್ಲು ಗೋನಾಳ, ಸಂಗಮೇಶ ತಾಳಿಕೋಟಿ ಹಾಗೂ ಕೀಡಾಭಿಮಾನುಗಳು ಉಪಸ್ಥಿತರಿದ್ದರು.